ರಾಜ್ಯ
ಬೆಂಗಳೂರಿನಲ್ಲೊಂದು ಬರ್ಬರ ಕೊಲೆ : ಕಲ್ಲು ಎತ್ತಿಹಾಕಿ ಯುವಕನ ಹತ್ಯೆ

ಬೆಂಗಳೂರು: ಬೆಂಗಳೂರಿನ ಕೆಂಗೇರಿ ಬಳಿಯ ಕೋನಸಂದ್ರದಲ್ಲಿ ಯುವಕನೋರ್ವನ ಬರ್ಬರ ಕೊಲೆಯಾಗಿದೆ. ಮಾರಕಾಸ್ತ್ರಗಳಿಂದ ಹಲ್ಲೆಗೈದು, ಕಲ್ಲು ಎತ್ತಿಹಾಕಿ ಯುವಕನ ಹತ್ಯೆ ಮಾಡಿರುವಂತಹ ಘಟನೆ ನಡೆದಿದೆ.
ಹೆಚ್.ಗೊಲ್ಲಹಳ್ಳಿಯ ನಿವಾಸಿ ಹೇಮಂತ್(27) ಬರ್ಬರ ಕೊಲೆಯಾದ ಯುವಕನಾಗಿದ್ದಾನೆ. ಹುಟ್ಟುಹಬ್ಬದ ದಿನವೇ ಹೇಮಂತ್ನನ್ನ ದುರುಳರು ಹತ್ಯೆಗೈದಿದ್ದಾರೆ.
ರಾತ್ರಿ ಸ್ನೇಹಿತನೊಂದಿಗೆ ಮನೆಯಿಂದ ಹೊರಹೋಗಿದ್ದ ಹೇಮಂತ್, ಪರಿಚಿತರೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಪೊಲೀಸರು ಈ ಕುರಿತಾಗಿ ತನಿಖೆ ಆರಂಭಿಸಿದ್ದಾರೆ.