ಮುಖ್ಯಮಂತ್ರಿಗಳು ನಾರಾಯಣ ಗುರು ನಿಗಮದ ಬೇಡಿಕೆಗಳ ಅನುಷ್ಠಾನದ ಭರವಸೆಗಳನ್ನು ಅತೀ ಶೀಘ್ರದಲ್ಲಿ ಈಡೇರಿಸುವಂತೆ ಒತ್ತಾಯ ; ಪ್ರವೀಣ್ ಎಂ. ಪೂಜಾರಿ
ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯು ರಾಜಕೀಯ ರಹಿತವಾಗಿ ಅನೇಕ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಿಕೊಂಡು ಬಂದು ಯಶಸ್ಸನ್ನು ಕಂಡಿದೆ. ಈ ಎಲ್ಲಾ ಹೋರಾಟದ ಸ್ಫೂರ್ತಿಯಿಂದ, ಬಿಲ್ಲವ ಸಮುದಾಯಕ್ಕೆ “ಪ್ರ -ವರ್ಗ 2A ಯಿಂದ ಪ್ರ -ವರ್ಗ 1 ಕ್ಕೆ,ಗರೋಡಿಗಳ ಪೂಜಾರಿ ಹಾಗೂ ಅರ್ಚಕರಿಗೆ ಮಾಸಾಶನ ಮತ್ತು ಬಹ್ಮಶ್ರೀ ನಾರಾಯಣ ಗುರು ನಿಗಮ” ವನ್ನು ಸರಕಾರದಿಂದ ಅನುಷ್ಠಾನಗೊಳಿಸುವ ಉದ್ದೇಶದಿಂದ, ಉಡುಪಿ ಜಿಲ್ಲೆಯ ಸಮಾಜದ ಎಲ್ಲಾ ಪ್ರತಿಷ್ಠಿತ ಸಂಘ -ಸಂಸ್ಥೆಗಳಿಗೆ, ಗರೋಡಿಗಳಿಗೆ , ಗುರು ಮಂದಿರಗಳಿಗೆ, ಸಮಾಜದ ಹಿರಿಯರ ಮನೆಗಳಿಗೆ ವೇದಿಕೆಯ ಸರ್ವಸದಸ್ಯರ ಜೊತೆಗೂಡಿ ಭೇಟಿ ಕೊಟ್ಟು,ಅವಲೋಕನ ಮಾಡಿ.
2019ರ ಪೆಬ್ರವರಿಯಲ್ಲಿ ಬ್ರಹ್ಮಾವರದಲ್ಲಿ ಬೃಹತ್ ಬಿಲ್ಲವ ಸಮಾವೇಶವು ಬಿಲ್ಲವ ಯುವ ವೇದಿಕೆಯ ನೇತೃತ್ವದಲ್ಲಿ ನಡೆದಿತ್ತು. ವೇದಿಕೆಯಲ್ಲಿ ಸಮಾಜದ ರಾಜಕೀಯ ಘಟಾನುಘಟಿಗಳ ಮುಖಾಂತರ ಅಂದಿನ ಘನ ಸರಕಾರಕ್ಕೆ ಮನವಿಯನ್ನು ಸಲ್ಲಿಸಿ, ಇಂದಿಗೆ ಮೂರು ವರ್ಷ ಕಳೆದರೂ, ಯಾವುದೇ ಸಕಾರಾತ್ಮಕ ಪ್ರಕ್ರಿಯೆಗಳು ನಡೆಯಲೇ ಇಲ್ಲ. ಆಶ್ವಾಸನೆಗಳು ಬರೀ ಸಮಾವೇಶದ ಧ್ವನಿವರ್ಧಕದಲ್ಲಿ ಮೊಳಗಿತೇ ವಿನಹ, ವಿಧಾನಸೌದಲ್ಲಾಗಲಿ, ವಿಧಾನಪರಿಷತ್ತಿನಲ್ಲಾಗಲಿ ಅಥವಾ ಸಚಿವ ಸಂಪುಟದಲ್ಲಾಗಲಿ ನಮ್ಮ ನಾಯಕರುಗಳು ಧ್ವನಿ ಎತ್ತಲೇ ಇಲ್ಲ. ಎತ್ತಿದಿದ್ರೆ ಇವತ್ತು ಬಹ್ಮಶ್ರೀ ನಾರಾಯಣಗುರು ನಿಗಮವಾದ್ರೂ ಆಗುತ್ತಿತ್ತು. ಭರವಸೆಯ ನಿರೀಕ್ಷೆ ಇನ್ನೂ ಜೀವಂತ ಇದ್ದುದರಿಂದ ದಿನಾಂಕ 13.07.2022 ರಂದು ಸಮಾಜದ ಹಿರಿಯರ ಜೊತೆಗೂಡಿ ರಾಜ್ಯದ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಬಸವರಾಜ್ ಬೊಮ್ಮಾಯಿ ಯವರಿಗೆ ಉಡುಪಿಯಲ್ಲಿ ಮಗದೊಮ್ಮೆ ಮನವಿಯನ್ನು ಸಲ್ಲಿಸಿದ್ದೇವೆ. ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಯವರು ನಾರಾಯಣಗುರು ನಿಗಮವನ್ನು ಅನುಷ್ಠಾನಗೊಳಿಸುವ ಭರವಸೆಯನ್ನು ಕೊಟ್ಟಿರುತ್ತಾರೆ. ಈ ಭರವಸೆಯನ್ನು ಕಾರ್ಯರೂಪಕ್ಕೆ ತರಲು ಹಾಗೂ ಸರಕಾರಕ್ಕೆ ಒತ್ತಡವನ್ನು ತರಲು ಶಾಸಕರಲ್ಲಿ ಹಾಗೂ ಸಚಿವರುಗಳಲ್ಲಿ ಮತ್ತೊಮ್ಮೆ ನಾವು ಪ್ರಸ್ತಾಪಿಸುತ್ತೇವೆ. ಜಿಲ್ಲೆಯ ಶಾಸಕರು, ಸಮುದಾಯದ ಗೌರವಾನ್ವಿತ ಸಚಿವರುಗಳು, ಹಾಗೂ ಉಸ್ತುವಾರಿ ಸಚಿವರೂ ತಮ್ಮ ಇಚ್ಚಾಶಕ್ತಿಯನ್ನು ತೋರಿಸಿ, ಸಚಿವ ಸಂಪುಟದಲ್ಲಿ ಅನುಮೋದನೆಗೊಳಿಸಬೇಕು.
ಒಂದು ತಿಂಗಳ ಅವಧಿಯ ಒಳಗೆ ರಾಜ್ಯ ಸರ್ಕಾರ ಕೊಟ್ಟ ಭರವಸೆಯನ್ನು ಈಡೇರಿಸದಿದ್ದರೆ, ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯು ಜಿಲ್ಲೆಯ ಎಲ್ಲಾ ಬಿಲ್ಲವ ಸಂಘ ಸಂಸ್ಥೆಗಳು, ಗರೋಡಿಗಳ ಪ್ರಮುಖರು, ಸಮಾಜದ ಹಿರಿಯ ಮಾರ್ಗದರ್ಶಕರ ಮುಂದಾಳತ್ವದಲ್ಲಿ ನಾರಾಯಣಗುರುಗಳ ಆಶೀರ್ವಾದದೊಂದಿಗೆ ಸಮಾಜದ ಎಲ್ಲಾ ಸದಸ್ಯರನ್ನು ಸೇರಿಸಿಕೊಂಡು ಸಮಾವೇಶದ ಬೇಡಿಕೆಗಳ ಈಡೇರಿಕೆಗೆ ಮುಂದಿನ ನಡೆಯ ಬಗ್ಗೆ ನಿರ್ಧರಿಸಲಾಗುವುದು. ಪ್ರವೀಣ್ ಎಂ ಪೂಜಾರಿ ಅಧ್ಯಕ್ಷರು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.