ಕರಾವಳಿ

ಚಾಕೋಲೇಟ್ ಕವರ್ ನುಂಗಿ 6 ವರ್ಷದ ಬಾಲಕಿ ಮೃತ್ಯು

ಬೈಂದೂರು : ಉಡುಪಿ ಜಿಲ್ಲೆಯ ಬೈಂದೂರು ಸಮೀಪ ಆರು ವರ್ಷದ ಬಾಲಕಿಯೊಬ್ಬಳು ಚಾಕಲೇಟ್ ಕವ್ವರ್ ನುಂಗಿ ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಇಂದು ಬೈಂದೂರಿನಲ್ಲಿ ಸಂಭವಿಸಿದೆ.

ಸಾವನ್ನಪ್ಪಿದ ಬಾಲಕಿ ಬೈಂದೂರು ತಾಲೂಕಿನ ಬವಳಾಡಿ ಮೂಲದ ಸಮನ್ವಿ (6) ಎಂದು ತಿಳಿಯಲಾಗಿದೆ.

ಬಾಲಕಿ ಉಪ್ಪುಂದ ಸ್ಥಳೀಯ ಆಂಗ್ಲ ಮಾಧ್ಯಮ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯಾಗಿದ್ದು, ಇಂದು
ಶಾಲೆಯ ಬಸ್ ಗೆ ಕಾಯುತ್ತಿದ್ದ ವೇಳೆ ಪ್ಲಾಸ್ಟಿಕ್ ಕವರ್ ಸಹಿತ ಚಾಕೊಲೇಟ್ ತಿಂದಾಗ ಗಂಟಲಲ್ಲಿ ಸಿಲುಕಿ ಮೃತಪಟ್ಟಿದ್ದಾಳೆ‌

ಸದ್ಯ ಬಾಲಕಿಯ ಮೃತದೇಹವನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಈ  ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನಷ್ಟೇ ಹೆಚ್ಚಿನ ಮಾಹಿತಿ ಸಿಗಬೇಕಿದೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!