
ದಿಗ್ಲಿಪುರ್: ಭಾರತದಲ್ಲಿ ಲಘು ಭೂಕಂಪನಗಳು ಮುಂದುವರೆದಿದ್ದು, ದಕ್ಷಿಣ ತುದಿಯ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದಲ್ಲಿ ಇಂದು ಭೂಮಿ ನಡುಗಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದ ದಿಗ್ಲಿಪುರ್ದಲ್ಲಿ ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆಯ ಭೂಕಂಪನ ಸಂಭವಿಸಿದೆ. ಭೂಕಂಪನದ ಕೇಂದ್ರ ದಿಗ್ಲಿಪುರ್ದಿಂದ ವಾಯುವ್ಯ ದಿಕ್ಕಿಗೆ 110 ಕಿ.ಮೀ ದೂರದಲ್ಲಿದೆ ಎಂದು ಹೇಳಲಾಗಿದೆ.ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದಲ್ಲಿ ಮಧ್ಯಮ ಪ್ರಮಾಣದ ಭೂಕಂಪನ ಸಂಭವಿಸಿದ್ದು, ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿದೆ.
An earthquake with a magnitude of 4.3 on the Richter Scale hit 110 km north west of Diglipur in Andaman and Nicobar at 02:17 hours today: National Center for Seismology
— ANI (@ANI) June 9, 2020