ರಾಜ್ಯ

ವಿದೇಶದಿಂದ ಬೆಂಗಳೂರಿಗೆ ಬಂದ 21 ಮಂದಿಗೆ ಕೊರೋನಾ ಸೋಂಕು

ಬೆಂಗಳೂರು: ವಿದೇಶಗಳಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ 21 ಮಂದಿಯಲ್ಲಿ ಕೊರೋನಾ ಸೋಂಕಿನ ಲಕ್ಷಣ ಕಂಡು ಬಂದಿದೆ. ಇದು ಆತಂಕ ಮೂಡಿಸಿದೆ.

ಪ್ಯಾರಿಸ್ ನಿಂದ ಹಿಂತಿರುಗಿದ ಏಳು ಮಂದಿಯಲ್ಲಿ ಕೊರೋನಾ ಸೋಂಕಿನ ಲಕ್ಷಣ ದೃಢಪಟ್ಟಿದೆ. ಅದೇ ರೀತಿ ದೋಹಾದಿಂದ ಆಗಮಿಸಿದ 7 ಮಂದಿಯಲ್ಲಿ ಸೋಂಕು ಕಂಡು ಬಂದಿದೆ.

ಕುವೈಟ್ ನಿಂದ ಆಗಮಿಸಿದ ಇಬ್ಬರು.ದುಬೈ ಮತ್ತು ಫ್ರಾಂಕ್ ಫರ್ಟ್ ನಿಂದ ಆಗಮಿಸಿದ ತಲಾ ಒಬ್ಬರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ.

ಸೋಂಕು ದೃಢಪಟ್ಟ ಎಲ್ಲರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!