ಪ್ರವೀಣ್ ನೆಟ್ಟಾರು ಸಾವಿಗೆ ನ್ಯಾಯ ದೊರಕಿಸಲೇಬೇಕು ; ಪ್ರವೀಣ್ ಎಂ ಪೂಜಾರಿ

ಉತ್ತಮ ಭವಿಷ್ಯ ಇದ್ದಂತಹ ಯುವನಾಯಕ ಪ್ರವೀಣ್ ನೆಟ್ಟಾರು ದುಷ್ಕರ್ಮಿಗಳಿಂದ ಹತ್ಯೆಯಾಗಿರುವುದು ದುರದೃಷ್ಟಕರ. ಶ್ರೀ ಕ್ಷೇತ್ರ ಗೆಜ್ಜೆಗಿರಿ,ಯುವವಾಹಿನಿ, ಬಿಲ್ಲವ ಸಂಘಟನೆ ಸೇರಿದಂತೆ ಹಿಂದೂ ಸಂಘಟನೆಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದ ಅಮಾಯಕನ ಕೊಲೆಯಾಗಿರುವುದು ಖೇದಕರ.ಸಹೋದರನೋರ್ವನ ಅಗಲುವಿಕೆಗೆ ಭಾವಪೂರ್ಣ ಶ್ರದ್ದಾಂಜಲಿ ಸಮರ್ಪಿಸುತ್ತೇವೆ.
ಭಾರತೀಯ ಜನತಾ ಪಕ್ಷದ ಕಾರ್ಯಕರ್ತನಾಗಿಯೂ ಗುರುತಿಸಿಕೊಂಡಿದ್ದ ಪ್ರವೀಣ್‌ನ ಹತ್ಯೆ ಮಾಡಿರುವ ಎಲ್ಲಾ ಆರೋಪಿಗಳನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸುತ್ತೇವೆ.ರಾಜ್ಯ ಸರ್ಕಾರ ಒಂದೇ ವರ್ಷದಲ್ಲಿ ವಿಧವೆಯಾದ ಪ್ರವೀಣನ ಮುಗ್ದ ಪತ್ನಿಗೆ ಸರ್ಕಾರ ಸೂಕ್ತವಾದ ಉದ್ಯೋಗದ ಅವಕಾಶ ಮತ್ತು ಕುಟುಂಬಕ್ಕೆ ಆರ್ಥಿಕ ಸವಲತ್ತನ್ನು ಕಲ್ಪಿಸಬೇಕು.ಅನ್ಯಾಯವನ್ನು ಖಂಡಿಸುತ್ತಿರುವ ಯುವಕಾರ್ಯಕರ್ತರ ಲಾಠಿಚಾರ್ಜ್ ಪ್ರಯೋಗಿಸಿದ ಸರ್ಕಾರದ ನಡವಳಿಕೆ ಹೀನಾಯವಾದುದು.ಇದು ನಾಚಿಕೆಕೇಡು.ಈ ಎಲ್ಲಾ ಬೆಳವಣಿಗೆಯನ್ನು ಖಂಡಿಸುತ್ತಾ ಪ್ರವೀಣ್ ಸಾವಿಗೆ ನ್ಯಾಯ ಒದಗಿಸಲೇಕೆಂದು ಸರ್ಕಾರವನ್ನು ಆಗ್ರಹಿಸುತ್ತೇವೆ.
ಪ್ರವೀಣ್ ಎಂ ಪೂಜಾರಿ ಅಧ್ಯಕ್ಷರು ಮತ್ತು ಸದಸ್ಯರು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ