ಕರಾವಳಿ
ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ : ಆರೋಪಿ ಮೇಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು

ಪಡುಬಿದ್ರಿ : ಅಪ್ರಾಪ್ತ ವಯಸ್ಕ ಬಾಲಕಿ ಮೇಲೆ ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣ ಯುವಕನೋರ್ವನನ್ನು ಪೋಕ್ಸೋ ಅಡಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಹೆಜಮಾಡಿ ಆಲಡೆ ಬಳಿಯ ನಿವಾಸಿ ಅಬ್ದುಲ್ ರೆಹಮಾನ್ ಅವರ ಮಗ ಯಾಸಿನ್ (19) ಬಂಧಿತ ಆರೋಪಿ, ಹಾಗೂ ಆರೋಪಿಗೆ ಸಹಕಾರ ನೀಡಿದ್ದ ಅಪ್ರಾಪ್ತ ವಯಸ್ಕ ಬಾಲಕನನ್ನೂ ವಶಪಡಿಸಿ ಕೊಂಡು ಅವನನ್ನು ಬಾಲಮಂದಿರಕ್ಕೆ ಪೊಲೀಸರು ಸೇರಿಸಿದ್ದಾರೆ.
ಆರೋಪಿಯನ್ನು ಉಡುಪಿಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಆರೋಪಿ ವಿರುದ್ಧ ಬಾಲಕಿಯ ತಂದೆ ನೀಡಿದ ದೂರಿನನ್ವಯ ಪೋಕ್ಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಬಾಲಕಿಯನ್ನು ಕರೆದೊಯ್ಯಲು ಬಳಸಿದ್ದ ಆಟೋ ರಿಕ್ಷಾವನ್ನೂ ಜಪ್ತಿ ಮಾಡಲಾಗಿದೆ.
ಪಡುಬಿದ್ರಿ ಠಾಣಾಧಿಕಾರಿ ಪುರುಷೋತ್ತಮ್ ತನಿಖೆ ನಡೆಸುತ್ತಿದ್ದಾರೆ.