ರಾಜ್ಯ

ಮನೆಯ ಟೆರೇಸ್ ನಲ್ಲಿ ಗಾಂಜಾ ಗಿಡ ಬೆಳೆಸಿದ ಆರೋಪ ಯುವಕನ ಬಂಧನ.

ಕಾಸರಗೋಡು: ಮನೆಯ ಟೆರೇಸ್ ನಲ್ಲಿ ಯುವಕನೋರ್ವ ಗಾಂಜಾ ಗಿಡಗಳನ್ನು ಬೆಳೆಸಿದ್ದ ಘಟನೆ ಕಿದೂರಿನಲ್ಲಿ ನಡೆದಿದ್ದು, ಆತನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.

ಬೇಕೂರು ಕನ್ನಡಿ ಪಾರೆಯ ನಜೀಬ್ ಮೆಹಫೂಜ್ ಬಂಧಿತ ಆರೋಪಿ.

ಕುಂಬಳೆ ಪೊಲೀಸರಿಗೆ ದೊರೆತ ಖಚಿತ ಮಾಹಿತಿಯಂತೆ ತಪಾಸಣೆ ಮಾಡಲಾಗಿದ್ದು, ಕಿದೂರಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ನಜೀಬ್ ಮೆಹಫೂಜ್ ಮನೆಯ ಟೆರೇಸ್ ನಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿದ್ದನು. ಈತ ತನ್ನ ಸ್ವಂತ ಬಳಕೆಗೆ ಅಲ್ಲದೆ ಮಾರಾಟಕ್ಕಾಗಿ ಕೂಡಾ ಗಾಂಜಾ ಗಿಡಗಳನ್ನು ಬೆಳೆಸಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ಈತ ಮಂಗಳೂರಿನ ಕಾಲೇಜೊಂದರಲ್ಲಿ ಕಲಿಯುತ್ತಿದ್ದು ಅಲ್ಲಿಂದಲೇ ಗಾಂಜಾ ಗಿಡದ ಬೀಜಗಳನ್ನು ಸಂಗ್ರಹಿಸಿರಬಹುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ

Related Articles

Leave a Reply

Your email address will not be published. Required fields are marked *

Back to top button
error: Content is protected !!