ಕಾಮನ್ವೆಲ್ತ್ ಗೇಮ್ಸ್ 2022 : ಲಾನ್ ಬೌಲ್ಸ್ನಲ್ಲಿ ಚಿನ್ನ ಗೆದ್ದು ಇತಿಹಾಸ ಬರೆದ ಭಾರತ ಮಹಿಳಾ ತಂಡ
ಬರ್ಮಿಂಗ್ಲಾಮ್: ಇಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್
ಗೇಮ್ಸ್ ಲಾನ್ ಬಾಲ್ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತ ಮಹಿಳಾ ತಂಡ ಐತಿಹಾಸಿಕ ಸಾಧನೆ ಮಾಡಿದೆ.
ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವನ್ನು 17-10 ಅಂತರದಿಂದ ಸೋಲಿಸುವ ಮೂಲಕ ಭಾರತೀಯ ಮಹಿಳೆಯರು ಈ ವಿಶೇಷ ಸಾಧನೆ ಮಾಡಿದರು.
ಭಾರತವು ಹಲವು ವರ್ಷಗಳಿಂದ ಕಾಮನ್ವೆಲ್ತ್ ಗೇಮ್ನಲ್ಲಿ ಭಾಗವಹಿಸುತ್ತಿದ್ದರೂ ಇದುವರೆಗೆ ಲಾನ್ ಬಾಲ್ನಲ್ಲಿ ಪದಕ ಗೆದ್ದಿರಲಿಲ್ಲ.
ಇದೀಗ ಭಾರತದ ತಂಡದ ಲವಿ ಚೌಬೆ, ಪಿಂಕಿ,
ನಯನ್ನೋನಿ ಸೈಕಿಯಾ ಮತ್ತು ರೂಪಾ ರಾಣಿ ಟಿರ್ಕಿ ಚಿನ್ನದ ಪದಕ ಗೆಲ್ಲುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಏನಿದು ಲಾನ್ ಬಾಲ್?: ಲಾನ್ ಬಾಲ್ ಎಂಬುದು
ಹೊರಾಂಗಣ ಕ್ರೀಡೆ. ಇದು 1930 ರಿಂದ ಕಾಮನ್ವೆಲ್ತ್ ಕ್ರೀಡಾಕೂಟದ ಭಾಗವಾಗಿದೆ. 22 ವರ್ಷಗಳಲ್ಲಿ ಭಾರತ ತಂಡ ಈ ಕ್ರೀಡೆಯಲ್ಲಿ ಯಾವುದೇ ಪದಕ ಗೆದ್ದಿರಲಿಲ್ಲ. ಆದರೆ ಈ
ಬಾರಿ ಫೈನಲ್ಗೆ ಪ್ರವೇಶಿಸುವ ಮೂಲಕ ಎಲ್ಲರ ಗಮನ ಸೆಳೆದಿದೆ.
ಇದು ಈಜಿಪ್ಟ್ ಮೂಲದ ಕ್ರೀಡೆಯಾಗಿದ್ದರೂ,
ಇತ್ತೀಚಿನ ದಿನಗಳಲ್ಲಿ ಯುರೋಪಿಯನ್ ದೇಶಗಳಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದೆ.