ರಾಷ್ಟ್ರೀಯ
ರಾಷ್ಟ್ರಧ್ವಜ ಮಡಚಲು ಸರಿಯಾದ ಕ್ರಮ ತಿಳಿಸಿದ ಕೇಂದ್ರ ಸರ್ಕಾರ

ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವ ನಡುವೆಯೇ ಕೇಂದ್ರ ಸರ್ಕಾರವು ರಾಷ್ಟ್ರ ಧ್ವಜವನ್ನು ಸರಿ ಮಡಿಸುವ ಮಾರ್ಗದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದೆ.
ಕೇಂದ್ರ ಸರ್ಕಾರವು ನೀಡಿರುವ ಮಾಹಿತಿಯ ಪ್ರಕಾರ ಕೇಸರಿ ಹಾಗೂ ಹಸಿರು ಬಣ್ಣವನ್ನು ಮಧ್ಯದಲ್ಲಿರುವ ಬಳಿ ಬಣ್ಣದ ಅಡಿಯಲ್ಲಿ ಮಡಚಬೇಕು. ಬಳಿಕ ಬಿಳಿ ಬಣ್ಣವನ್ನು ಬಲ ಹಾಗೂ ಎಡ ಭಾಗಗಳಲ್ಲಿ ಮಡಚಿ ತೋಳುಗಳು ಅಥವಾ ಅಂಗೈನಲ್ಲಿ ರಾಷ್ಟ್ರಧ್ವಜವನ್ನು ತೆಗೆದುಕೊಂಡು ಹೋಗಬೇಕು ಎಂದು ಹೇಳಲಾಗಿದೆ.