ಎಲ್.ಜಿ ಇಂಡಸ್ಟ್ರೀಸ್ ಸಂಸ್ಥೆಯಲ್ಲಿ ರಾಷ್ಟ್ರಧ್ವಜ ವಿತರಣೆಗೆ ಚಾಲನೆ

ಉಡುಪಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಪ್ರಧಾನಮಂತ್ರಿಯವರ ಮಹತ್ತರ ಯೋಜನೆಯಾದ ಹರ್ ಘರ್ ತಿರಂಗ ಕಾರ್ಯಕ್ರಮದಡಿ ಎಲ್ಲಾ ಮನೆಗಳಲ್ಲಿ ಆಗಸ್ಟ್
13 ರಿಂದ 15 ರ ವರೆಗೆ ರಾಷ್ಟ್ರಧ್ವಜವನ್ನು
ಹಾರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್. ಹೇಳಿದರು.
ಅವರು ಕೋಟೇಶ್ವರದ ಎಲ್.ಜಿ. ಇಂಡಸ್ಟ್ರೀಸ್ ಸಂಸ್ಥೆಯಲ್ಲಿ ಸಂಸ್ಥೆಯ ವತಿಯಿಂದ ಸಾವಿರಕ್ಕೂ ಅಧಿಕ ರಾಷ್ಟ್ರಧ್ವಜ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು. ಸಂಸ್ಥೆಯ ಈ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅಪರ ಜಿಲ್ಲಾಧಿಕಾರಿಗಳು ಪ್ರತಿ ಮನೆಗಳಲ್ಲಿಯೂ ಧ್ವಜ ಹಾರಿಸುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಮಿಕರಿಗೆ ರಾಷ್ಟ್ರಧ್ವಜ
ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕೋಟೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣಗೊಲ್ಲ ಆರೋಗ್ಯ ಅಧಿಕಾರಿ ಡಾ. ಪೂರ್ಣಿಮಾ, ಕೋಟೇಶ್ವರದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಮುಖ್ಯೋಪಾಧ್ಯಾಯ ಯೋಗಿ ನಾಯಕ್, ಸಂಸ್ಥೆಯ ದೀಕ್ಷಾ ಕಾಮತ್ ಮತ್ತು ಹರ್ಷಾ ಕಾಮತ್, ಸಂಸ್ಥೆಯ ಕಾರ್ಮಿಕರು
ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಅಶೋಕ್
ಭಂಡಾರ್ಕರ್ ನಿರೂಪಿಸಿದರು, ಹರ್ಷಾ ಕಾಮತ್
ವಂದಿಸಿದರು.