ರಾಷ್ಟ್ರೀಯ
ನೂತನ ಉಪರಾಷ್ಟ್ರಪತಿಯಾಗಿ ಜಗದೀಪ್ ಧನಕರ್ ಆಯ್ಕೆ
ನವದೆಹಲಿ: ಎನ್‌ಡಿಎ ಅಭ್ಯರ್ಥಿ ಜಗದೀಪ್ ಧನಕರ್
ವಿರೋಧ ಪಕ್ಷದ ಅಭ್ಯರ್ಥಿ ಮಾರ್ಗರೆಟ್ ಆಳ್ವ ವಿರುದ್ಧ ಗೆಲುವನ್ನು ಸಾಧಿಸುವ ಮೂಲಕ ಭಾರತದ ನೂತನ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ.
ನಡೆದ ಮತದಾನದಲ್ಲಿ ಲೋಕಸಭೆ ಮತ್ತು
ರಾಜ್ಯಸಭೆಯ ಸಂಸದರು ಭಾಗವಹಿಸಿದರು. 780 ಸಂಸದರ ಪೈಕಿ ಒಟ್ಟು 725 ಮಂದಿ ಮತ ಚಲಾಯಿಸಿದರು. ಶೇ 92.94 ಮತದಾನವಾಗಿದೆ.
ಜಗದೀಪ್ ಧನಕರ್ 528 ಮತಗಳನ್ನು ಪಡೆದರು,
ಮಾರ್ಗರೆಟ್ ಆಳ್ವ 182 ಮತಗಳನ್ನು ಪಡೆದರು. ಆಗಸ್ಟ್ 11 ರಂದು ನೂತನ ಉಪರಾಷ್ಟ್ರಪತಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಮೇ 18, 1951 ರಂದು ರಾಜಸ್ಥಾನದಲ್ಲಿ ಜನಿಸಿದ ಜಗದೀಪ್ ಧನಕರ್, ಬಿ.ಎಸ್.ಸಿ ಮತ್ತು ಎಲ್.ಎಲ್.ಬಿ ಪದವಿ ಪಡೆದಿದ್ದಾರೆ. ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿಯೂ
ಅವರು ಸೇವೆ ಸಲ್ಲಿಸಿದ್ದಾರೆ.