ವಿಶೇಷ ಲೇಖನಗಳು

ಪ್ರಧಾನಮಂತ್ರಿ ಮತ್ತ್ವಸಂಪದ ಯೋಜನೆ : ಅರ್ಜಿ ಆಹ್ವಾನ

ಉಡುಪಿ: ಮೀನುಗಾರಿಕೆ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ
ಯೋಜನೆಯಾದ ಪ್ರಧಾನಮಂತ್ರಿ ಮತ್ರ್ಯಸಂಪದ ಯೋಜನೆ ಹಾಗೂ ನೀಲಿಕ್ರಾಂತಿ ಯೋಜನೆಯಡಿ 2018-19 ಮತ್ತು 2019-20 ರಲ್ಲಿ ಬಾಕಿ ಉಳಿದಿರುವ ಘಟಕಗಳಿಗಾಗಿ ಅರ್ಹ
ಫಲಾನುಭವಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ.

ಪ್ರಧಾನಮಂತ್ರಿ ಮತ್ತ್ವಸಂಪದ ಯೋಜನೆಯಡಿ ಹಿನ್ನಿರು, ಲವಣ ಹಾಗೂ ಕ್ಷಾರೀಯ ಪ್ರದೇಶಗಳಲ್ಲಿ ಬಯೋಫ್ಲಾಕ್ ಕೊಳಗಳ ನಿರ್ಮಾಣ, ಸಿಹಿನೀರಿನ ಬಯೋಫ್ಲಾಕ್ ಕೊಳಗಳ ನಿರ್ಮಾಣ, ಕಡಲ ಮೀನುಗಳ ಸಣ್ಣ ಹ್ಯಾಚರಿ ಕೇಂದ್ರಗಳ
ಸ್ಥಾಪನೆ, ಕಡಲ ಕಳೆ ಕೃಷಿಗೆ ರಾಫ್ಟ್ ಪದ್ಧತಿ, ಮೊನೊಲಿನ್/ ಟ್ಯೂಬೆನೆಟ್ ಪದ್ಧತಿ ವಿಧಾನದೊಂದಿಗೆ ಕಡಲಕಳೆ ಕೃಷಿ
ಸ್ಥಾಪನೆ, ಬ್ಯಾಕ್ ಯಾರ್ಡ್ ಅಲಂಕಾರಿಕ ಮೀನು ಸಾಕಾಣಿಕ ಘಟಕ, ಮಧ್ಯಮ ಪ್ರಮಾಣದ ಅಲಂಕಾರಿಕ ಮೀನು ಸಾಕಾಣಿಕ ಘಟಕ, ಮಧ್ಯಮ ಆರ್.ಎ.ಎಸ್ ಘಟಕ ಸ್ಥಾಪನೆ, ಸಣ್ಣ ಆರ್.ಎ.ಎಸ್ ಘಟಕ, ಹಿತ್ತಲಿನ ಮಿನಿ ಆರ್.ಎ.ಎಸ್
ಘಟಕಗಳ ಸ್ಥಾಪನೆ, ಶೈತ್ಯಾಗಾರ/ಮಂಜುಗಡ್ಡೆ ಸ್ಥಾವರಗಳ ನಿರ್ಮಾಣ, ಶೈತ್ಯಾಗಾರ/ಮಂಜುಗಡ್ಡೆ ಸ್ಥಾವರಗಳ ಆಧುನೀಕರಣ, ಐಸ್ ಪೆಟ್ಟಿಗೆಗಳೊಂದಿಗೆ ಸೈಕಲ್, ಅಲಂಕಾರಿಕ ಮೀನು/ಅಕ್ಟೇರಿಯಂ ಮಾರಾಟ ಮಳಿಗೆ ಸೇರಿದಂತೆ ಚಿಲ್ಲರೆ ಮೀನು ಮಾರಾಟ ಮಳಿಗೆಗಳ ನಿರ್ಮಾಣ, ರಫ್ತು ಸಾಮರ್ಥ್ಯಕ್ಕಾಗಿ ಅಸ್ತಿತ್ವದಲ್ಲಿರುವ
ಮೀನುಗಾರಿಕಾ ದೋಣಿಗಳ ಉನ್ನತೀಕರಣ, ಯಾಂತ್ರೀಕೃತ ಮೀನುಗಾರಿಕಾ ದೋಣಿಗಳಲ್ಲಿ ಜೈವಿಕ ಶೌಚಾಲಯಗಳ ಸ್ಥಾಪನೆ, ಸಾಂಪ್ರದಾಯಿಕ ಮತ್ತು ಯಾಂತ್ರೀಕೃತ ದೋಣಿಗಳಿಗೆ ಸಂವಹನ ಮತ್ತು ಟ್ರಾಕಿಂಗ್ ಸಾಧನಗಳು, ಸಾಂಪ್ರದಾಯಿಕ ಮತ್ತು ಯಾಂತ್ರೀಕೃತ ಮೀನುಗಾರಿಕಾ ದೋಣಿಗಳ ಮೀನುಗಾರರಿಗೆ ಸುರಕ್ಷತಾ ಕಿಟ್‌ಗಳನ್ನು ಒದಗಿಸಲು ಬೆಂಬಲ, ಸಾಂಪ್ರದಾಯಿಕ ಮೀನುಗಾರರಿಗೆ ದೋಣಿ (ಬದಲಿ) ಮತ್ತು ಬಲೆ ಒದಗಿಸುವುದು ಹಾಗೂ ನೀಲಿಕ್ರಾಂತಿ ಯೋಜನೆಯಡಿ 10 ಮೀ ಉದ್ದದ ಎಫ್.ಆರ್.ಪಿ ದೋಣಿ ಶಾಖ ನಿರೋಧಕ ಐಸ್ ಮತ್ತು ಮೀನು ಪೆಟ್ಟಿಗೆ ಮತ್ತು ಕಡಲಕಳೆ ಕೃಷಿ ಘಟಕಗಳಿಗೆ ಆಗಸ್ಟ್15 ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಉಡುಪಿ, ಕಾರ್ಕಳ ಹಾಗೂ ಕುಂದಾಪುರ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿ ಅಥವಾ ಮೀನುಗಾರಿಕೆ ಇಲಾಖೆಯ
ಉಪನಿರ್ದೇಶಕರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!