ಕರಾವಳಿಗರ ಮುಂದೆ ಮಂಡಿಯೂರಿದ ಜೀ ಕನ್ನಡ: ಕಾರ್ಯಕ್ರಮದ ವೇದಿಕೆಯಲ್ಲಿ ಕ್ಷಮೆ.
ಜುಲೈ 23 ನೇ ತಾರೀಖು ಜೀ ಕನ್ನಡ ವಾಹಿನಿಯಲ್ಲಿ ನಡೆದ ರಿಯಾಲಿಟಿ ಷೋ ಒಂದರಲ್ಲಿ ಯಕ್ಷಗಾನ ವೇಷಭೂಷಣ ತೊಟ್ಟ ಸ್ಪರ್ಧಿಗಳು ಅಸಹ್ಯ ಹಾಡಿಗೆ ಅಸಂಬದ್ಧವಾಗಿ ನೃತ್ಯ ಮಾಡಿದ್ದರು, ಇದಕ್ಕೆ ತೀರ್ಪುಗಾರರು ಕೂಡ ಬೆಂಬಲಿಸುವಂತೆ ವಿಕೃತವಾಗಿ ನಗುತ್ತಿದ್ದರು. ಈ ಕಾರ್ಯಕ್ರಮ ವೀಕ್ಷಣೆಯ ಬೆನ್ನಲ್ಲೇ ಕರಾವಳಿಗರು ಆಕ್ರೋಶ ವ್ಯಕ್ತಪಡಿಸಿದ್ದರು.
ಕಳೆದ ವಾರ ವಸಂತ್ ಗಿಳಿಯಾರ್, ಅಜಿತ್ ಕಿರಾಡಿ, ಕ.ರ.ವೇ ರಾಜ್ಯಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಶಿವಾನಂದ್ ಶೆಟ್ಟಿ ,ಹಲವಾರು ಜನ ಯಕ್ಷಗಾನ ಸಂಘಟಕರು ,ಸಮಾನಮನಸ್ಕರು ಸೇರಿ ಝಿ ಕನ್ನಡ ವಾಹಿನಿಯ ಮುಂದೆ ಶಾಂತಿಯುತ ಪ್ರತಿಭಟನೆ ಮಾಡಿ ಕ್ಷಮೆ ಕೇಳುವಂತೆ ಆಗ್ರಹಿಸಿ ಪತ್ರ ನೀಡಿದ್ದರು. ಅದರ ಫಲವೇ ನಿನ್ನೆ ಝಿ ಕನ್ನಡ ಅದೇ ವೇದಿಕೆಯಲ್ಲಿ ಕ್ಷಮೆ ಕೇಳಿದೆ.
ಇದು ಎಲ್ಲಾ ವಾಹಿನಗಳಿಗೂ ಒಂದು ಪಾಠವಾಗಲಿದೆ, ಇನ್ನೆಂದೂ ಕರಾವಳಿಯ ಸಮೃದ್ದ ಸಾಂಸ್ಕೃತಿಕ ಕಲೆ ಯಕ್ಷಗಾನವನ್ನು ಯಾವುದೇ ವಾಹಿನಿಗಳು ಅಸಹ್ಯವಾಗಿ ತೋರಿಸಿ ಅವಮಾನಿಸಬಾರದು ಎಂದು ಈ ಮೂಲಕ ಇದು ಎಚ್ಚರಿಕೆಯ ಘಂಟೆಯಾಗಿದೆ.