ಆಜಾದಿ ಕಾ ಅಮೃತ್ ಮಹೋತ್ಸವ್ ವಿಶೇಷ ಉಪನ್ಯಾಸ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ

ಮಂಗಳೂರು : ವಿಶ್ವವಿದ್ಯಾನಿಲಯವು 11-08-2022 ರಂದು ಮಂಗಳಗಂಗೋತ್ರಿಯ ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀನಿವಾಸ ಮಲ್ಯ ಸಭಾಂಗಣದಲ್ಲಿ “ಆಜಾದಿ ಕಾ ಅಮೃತ್ ಮಹೋತ್ಸವ” ನಿಮಿತ್ತ “75 ವರ್ಷಗಳಲ್ಲಿ ಭಾರತೀಯ ಆರ್ಥಿಕತೆಯ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿ” ಕುರಿತು ವಿಶೇಷ ಉಪನ್ಯಾಸ ಸರಣಿಯನ್ನು ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಡಾ. ರಾಜೇಶ್ ನಾಯಕ್, ಡೈರೆಕ್ಟರ್ (ಟ್ರೈನಿಂಗ್), ಕಾಲೇಜ್ ಓಫ್ ಬ್ಯಾಂಕಿಂಗ್ ಆಂಡ್ ಫೈನಾನ್ಸಿಯಲ್ ಸ್ಟಡೀಸ್, ಮಸ್ಕತ್ ಅವರು “ಎಂಪವರ್ಮೆಂಟ್ ಒಫ್ ಇಂಡಿಯನ್ ಯೂತ್ ಫಾರ್ ಗ್ಲೋಬಲ್ ಜಾಬ್ಸ್” ಹಾಗೂ ಸಿ ಎ ಗೋಕುಲದಾಸ್ ಪೈ, ವರ್ಲ್ಡ್ ಬ್ಯಾಂಕ್ ಎಕ್ಸಿಕುಟಿವ್ , ಯುಎಸ್ಎ ಅವರು “ಕ್ಯಾಪೆಬಿಲಿಟಿ ಟು ಇಕ್ವಿಪ್ ಫಾರ್ ವೈಟ್ ಕಾಲರ್ ಜಾಬ್ಸ್ ಗ್ಲೋಬಲಿ” ಹಾಗೂ ಸಿ ಎ ಎಸ್ ಎಸ್ ನಾಯಕ್, ಪಾಸ್ಟ್ ಚೇರ್ಮನ್, ಐಸಿಎಐ ಅವರು “ಮೇಕರ್ ಆಂಡ್ ಗೇಮ್ ಚೇಂಜರ್ ತ್ರು ಬಿಸಿನೆಸ್” ವಿಷಯದ ಉಪನ್ಯಾಸವನ್ನು ನೀಡಿದರು.
ಈ ಸಂದರ್ಭದಲ್ಲಿ ಸಿಎ ಎಸ್ ಎಸ್ ನಾಯಕ್ ರವರ ಮೂರನೇ ಕೃತಿ “ವೈಸ್ ವರ್ಡ್ಸ್ ಆಫ್ ದಿ ವೈಸ್” ಪುಸ್ತಕವನ್ನು ಮಂಗಳೂರು ವಿಶ್ವ ವಿದ್ಯಾನಿಲಯದ ಉಪ ಕುಲಪತಿಗಳಾದ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರು ಬಿಡುಗಡೆ ಗೊಳಿಸಿದರು.
ಈ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಡೀನ್ ಪ್ರೊ .ವೈ. ಮುನಿರಾಜು, ಪ್ರೊ ಪುಟ್ಟಣ್ಣ, ಚೇರ್ಮನ್, ಡಿಪಾರ್ಟ್ ಮೆಂಟ್ ಒಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್, ಪ್ರೊ. ವಿಶ್ವನಾಥ, ಚೇರ್ಮನ್, ಡಿಪಾರ್ಟ್ಮೆಂಟ್ ಒಫ್ ಎಕನಾಮಿಕ್ಸ್, ಡಾ. ಪರಮೇಶ್ವರ, ಚೇರ್ಮನ್, ಡಿಪಾರ್ಟ್ಮೆಂಟ್ ಒಫ್ ಕಾಮರ್ಸ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಹ ಪ್ರಾಧ್ಯಾಪಕಿ ಪ್ರೀತಿ ಕೀರ್ತಿ ಡಿಸೋಜ, ಡಿಪಾರ್ಟ್ಮೆಂಟ್ ಒಫ್ ಕಾಮರ್ಸ್ ನಿರೂಪಿಸಿದರು ಹಾಗೂ ಸಿ ಎ ವಿದ್ಯಾರ್ಥಿಗಳಾದ ಶ್ರೀ ಮೆಲ್ವಿನ್ ಜೊಸ್ವಿನ್ ಲೋಬೊ ಹಾಗೂ ಶ್ರೀ ಶಿಹಾಬುದ್ದೀನ್ ಖಾನ್ ಅವರು ಸಹಕರಿಸಿದರು.
ಸಿ ಎ ಎಸ್ ಎಸ್ ನಾಯಕ್ ರವರು ಈ ಮುಂಚೆ ಎರಡು ಕೃತಿ ಗಳಾದ “ವರ್ಡ್ಸ್ ಒಫ್ ದಿ ವೈಸ್” ಹಾಗೂ “ಮೋರ್ ವರ್ಡ್ಸ್ ಒಫ್ ದಿ ವೈಸ್” ರಚಿಸಿರುತ್ತಾರೆ. ಈ ಎಲ್ಲಾ ಪುಸ್ತಕಗಳಲ್ಲಿ ದೈನಂದಿನ ಜೀವನಕ್ಕೆ ಹಾಗೂ ವ್ಯವಹಾರಕ್ಕೆ ಮಾರ್ಗದರ್ಶಿತ್ವ ನೀಡುವ ಅನೇಕ ನುಡಿಮುತ್ತುಗಳು ಇದ್ದು ವಾಚಕರಿಗೆ ಉಪಯುಕ್ತವಾಗಿದೆ ಎಂದು ಪಿ.ಎಸ್. ಯಡಪಡಿತ್ತಾಯ ಅವರು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಸುಮಾರು 250 ಪಿಜಿ (ಸ್ನಾತಕೋತ್ತರ) ವಿದ್ಯಾರ್ಥಿಗಳು, 20 ಸಂಶೋಧನಾ ವಿದ್ಯಾರ್ಥಿಗಳು, 15 ಪ್ರಾಧ್ಯಾಪಕರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಡಿಪಾರ್ಟ್ಮೆಂಟ್ ಒಫ್ ಕಾಮರ್ಸ್, ಡಿಪಾರ್ಟ್ಮೆಂಟ್ ಒಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಹಾಗೂ ಡಿಪಾರ್ಟ್ಮೆಂಟ್ ಒಫ್ ಎಕನಾಮಿಕ್ಸ್ ಇವರು ಸಂಯುಕ್ತ ವಾಗಿ ಆಯೋಜಿಸಸಿದರು.