ರಾಷ್ಟ್ರೀಯ
ಇಂದಿನ ಕೊರೋನಾ ಪ್ರಕರಣ ವಿವರ

ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕು ಪ್ರಕರಣ ಇಳಿಮುಖ ದಾಖಲಿಸಿದೆ. ಕಳೆದ 24 ಗಂಟೆ ಅವಧಿಯಲ್ಲಿ ಹೊಸದಾಗಿ 1,27,952 ಕೊರೋನಾ ಸೋಂಕು ಪ್ರಕರಣ ವರದಿಯಾಗಿದೆ. .
ಇದೇ ಅವಧಿಯಲ್ಲಿ ಕೊರೋನಾದಿಂದ 2,30,814 ಮಂದಿ ಗುಣಮುಖರಾಗಿದ್ದಾರೆ. ದೇಶದಲ್ಲಿನ ಸಕ್ರಿಯ ಕೊರೋನಾ ಪ್ರಕರಣಗಳ 13,31,648 ಕ್ಕೆ ಇಳಿದಿದೆ. ಇದು ಆಶಾದಾಯಕ ಬೆಳವಣಿಗೆಯಾಗಿದೆ.
ಕೊರೋನಾದಿಂದ ಕಳೆದ 24 ಗಂಟೆ ಅವಧಿಯಲ್ಲಿ 1059 ಜನರು ಮೃತಪಟ್ಟಿದ್ದಾರೆ. ದೇಶದಲ್ಲಿ ಕೊರೋನಾದಿಂದ ಇದುವರೆಗೆ 5,01,114 ಜನರು ಸಾವನ್ನಪ್ಪಿದ್ದಾರೆ.