ರಾಜ್ಯ

ಧ್ವಜಾರೋಹಣದ ವೇಳೆ ಕುಸಿದು ಬಿದ್ದು ನಿವೃತ್ತ ಸೈನಿಕ ಮೃತ್ಯು

ಕಡಬ: ಧ್ವಜಾರೋಹಣದ ವೇಳೆ ಕುಸಿದು ಬಿದ್ದು ನಿವೃತ್ತ ಸೈನಿಕರೊಬ್ಬರು ಮೃತಪಟ್ಟಿರುವ ಘಟನೆ ಕುಟ್ರುಪಾಡಿ ಗ್ರಾಂ. ಪಂ. ವತಿಯಿಂದ ಹಳೆ ಸ್ಟೇಶನ್ ಅಮೃತ ಸರೋವರದ ಬಳಿ ಧ್ವಜಾರೋಹಣನೆರವೇರುತ್ತಿರುವ ಸಂದರ್ಭದಲ್ಲಿ ನಡೆದಿದೆ.

ಧ್ವಜಾರೋಹಣ ಮಾಡಲು ಹೊಸಮಠ ಸಿ.ಎ. ಬ್ಯಾಂಕಿನ ಮಾಜಿ ಅಧ್ಯಕ್ಷ ಎನ್. ಕರುಣಾಕರ ಗೋಗಟೆ ಸಿದ್ಧತೆ ಮಾಡುತ್ತಿದ್ದಾಗ ಅವರಿಗೆ ನಿವೃತ್ತ ಸೈನಿಕ ಗಂಗಾಧರ ಗೌಡ ಅವರು ಧ್ವಜ ವಂದನೆಯ ಮಾಹಿತಿ ನೀಡಿ ಧ್ವಜಾರೋಹಣಕ್ಕೆ ಸಿದ್ದವಾಗುತ್ತಿದ್ದ ಸಂದರ್ಭ ಗಂಗಾಧರ ಗೌಡ ಅವರು ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದು ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ವೇಳೆ ದಾರಿ ಮಧ್ಯದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!