ಕರಾವಳಿ

75 ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಾಗೂ ಅಖಂಡ ಭಾರತದ ಸಂಕಲ್ಪ ದ ಪ್ರಯುಕ್ತ ಪಂಜಿನ ಮೆರವಣಿಗೆ

ಹಿಂದೂ ಯುವ ಸೇನೆ ಶ್ರೀ ದುರ್ಗಾಪರಮೇಶ್ವರಿ ಘಟಕ ಅಗ್ರಹಾರ ಏಣಗುಡ್ಡೆ ಕಟಪಾಡಿ ಇದರ ವತಿಯಿಂದ ಅಖಂಡ ಭಾರತದ ಸಂಕಲ್ಪ ದ ಪ್ರಯುಕ್ತ ಪಂಜಿನ ಮೆರವಣಿಗೆ ಆಗಸ್ಟ್ 14 ರ ರಾತ್ರಿ ಕಟಪಾಡಿ ಪೇಟೆ ಯಲ್ಲಿ ಪ್ರಾರಂಭಗೊಂಡಿತು.

ಬಿಜೆಪಿ ಹಿಂದುಳಿದ ಯುವ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಸುವರ್ಣ ರವರು ಭಾರತ ಮಾತೆಗೆ ದೀಪವನ್ನು ಬೆಳಗಿಸುವುದರ ಚಾಲನೆ ನೀಡಿದರು.

ಅಧ್ಯಕ್ಷೀಯ ಭಾಷಣವನ್ನು ಮಾಡಿದ ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಪ್ರಕಾಶ್ ಪಾದೆಬೆಟ್ಟು ರವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹುತಾತ್ಮರನ್ನು ಸ್ಮರಿಸಿದರು. ಹಾಗೂ ಅಖಂಡ ಭಾರತದ ನಿರ್ಮಾಣಕ್ಕಾಗಿ ಎಲ್ಲರೂ ಕೈ ಜೋಡಿಸಬೇಕೆಂದು ತಿಳಿಸಿದರು. ನಂತರ ಮಾತನಾಡಿದ ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಗೀತಾಂಜಲಿ ಸುವರ್ಣ ರವರು ಅಖಂಡ ನಿರ್ಮಾಣಕ್ಕಾಗಿ ಪಣ ತೊಡುತ್ತಿರುವ ಸಂಘಟನೆಯ ಕಾರ್ಯಕರ್ತರ ಶ್ರಮವನ್ನು ಸ್ಮರಿಸಿದರು.

ಈ ಸಂಧರ್ಭದಲ್ಲಿ ಬಿಜೆಪಿ ಮಹಿಳಾಮೋರ್ಚಾ ಉಡುಪಿ ಜಿಲ್ಲಾಧ್ಯಕ್ಷರಾದ ವೀಣಾಶೆಟ್ಟಿ,ಗುರುಪ್ರಸಾದ್ ಶೆಟ್ಟಿ,ಕುರ್ಕಾಲು ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಗಳಾದ ಗುರುಕೃಪಾ ರಾವ್,ಕಾಪುಹಿಂದುಳಿದ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಳಾದ ರವಿ ಕೋಟ್ಯಾನ್, ಹಿಂದುಯುವಸೇನೆ ಪರಶುರಾಮ ಘಟಕ ಕಟಪಾಡಿ ಇದರ ಮಾಜಿ ಅಧ್ಯಕ್ಷರಾದ ವಿಜಯ್ ಸುವರ್ಣ, ಕಾಪು ಕ್ಷೇತ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗೋಪಾಲ್ ಕೃಷ್ಣ ರಾವ್,ಜಿಲ್ಲಾ ಯುವ ಮೋರ್ಚಾದ ಪಧಾದಿಕಾರಿಯಾದ ಅಭಿರಾಜ್ ಸುವರ್ಣ, ಮಾಜಿ ತಾಲೂಕ್ ಪಂಚಾಯತ್ ಸದಸ್ಯರಾದ ಸಚಿನ್ ನಾಯಕ್,ತಾಲೂಕ್ ಪಂಚಾಯತ್ ಸದಸ್ಯರಾದ ನಾಗೇಶ್ ಪೂಜಾರಿ,ಕಟಪಾಡಿ ಪಂಚಾಯತ್ ನ ಮಾಜಿ ಸದಸ್ಯರಾದ ಶ್ರೀಧರ್ ಮಾಬ್ಯಾನ್, ಹಿಂದೂ ಯುವ ಸೇನೆ ಶ್ರೀ ದುರ್ಗಾಪರಮೇಶ್ವರಿ ಘಟಕದ ಅಧ್ಯಕ್ಷರಾದ ದಿಲೀಪ್ ಕುಮಾರ್,ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಗೂ ಕಟಪಾಡಿ ಯ ಯುವಜನರು ಭಾಗವಹಿಸಿದ್ದರು.

ಕಟಪಾಡಿ ಪೇಟೆಯಿಂದ ಹೊರಟ ಪಂಜಿನ ಮೆರವಣಿಗೆ ಯು ದೇಶ ಭಕ್ತಿಯಿಂದ ಜೈಕಾರವನ್ನು ಹಾಕಿ ಅಗ್ರಹಾರ ಮಣಿಪುರ ರಸ್ತೆಯಲ್ಲಿ ಸಾಗಿ ಏಣಗುಡ್ಡೆ ದುರ್ಗಾನಗರ ವನ್ನು ತಲುಪಿ ನಂತರ ಅಗ್ರಹಾರ ರಸ್ತೆಯಲ್ಲಿ ಸಾಗಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅಗ್ರಹಾರ ಇದರ ಮುಂಭಾಗ ದಲ್ಲಿ ಸಮಾಪನೆಗೊಂಡಿತು.

ನಂತರ ನಡೆದ ಸಮಾರೋಪ ಸಭಾರಂಭದಲ್ಲಿ ಕಾಪು ಶಾಸಕರಾದ ಮಾನ್ಯ ಶ್ರೀ ಲಾಲಾಜಿ ಮೆಂಡನ್ ರವರು ಮಾತನಾಡಿ 75ನೇ ಸ್ವಾತ್ರತ್ಯೋತ್ಸವಕ್ಕೆ ಶುಭಹಾರೈಸಿದರು. ಹಾಗೂ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಹೋರಾಟಗಾರರನ್ನು ಸ್ಮರಿಸಿದರು.ಹಾಗೂ ನಮ್ಮ ನೆಚ್ಚಿನ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಿಳಿಸಿ ಸದೃಢ ಭಾರತ ನಿರ್ಮಾಣ ಕ್ಕಾಗಿ ಎಲ್ಲರೂ ಕೈ ಜೋಡಿಸಿ ಬೇಕೆಂದು ತಿಳಿಸಿದರು.

ಹಾಗೂ ಹಿಂದೂ ಯುವಸೇನೆ ಶ್ರೀ ದುರ್ಗಾಪರಮೇಶ್ವರಿ ಘಟಕದ ವತಿಯಿಂದ ದೇಶದ ಸ್ವಾತಂತ್ರ್ಯೋತ್ಸವದಂದು ಜನಿಸಿ 75ನೇ ಹುಟ್ಟುಹಬ್ಬವನ್ನುಆಚರಿಸುತ್ತಿರುವ ಕಟಪಾಡಿರೋಟರಿ ಕ್ಲಬ್ ನ ಮಾಜಿ ಅಧ್ಯಕ್ಷರೂ ಅಗ್ರಹಾರ ದುರ್ಗಾಪರಮೇಶ್ವರಿ ದೇವಳದ ಆಡಳಿದ ಮೊಕ್ತೇಸರರಾದ ಶ್ರೀ ವೈ ಭರತ್ ಹೆಗ್ಡೆ ರನ್ನು ಸನ್ಮಾನಿಸಲಾಯಿತು.ಈ ಸಂಧರ್ಭದಲ್ಲಿ ಮಾತಾಡಿದ ಅವರು ಸಂಘದ ಸಾಮಾಜಿಕ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ಇನ್ನು ಮುಂದೆಯೂ ಸಂಘದ ವತಿಯಿಂದ ಅನೇಕ ಸಾಮಾಜಿಕ ಕಾರ್ಯಗಳು ನಡೆಯಲಿ ಎಂದು ಶುಭ ಹಾರೈಸಿದರು.

ಈ ಸಂಧರ್ಭದಲ್ಲಿ ಗೀತಾಂಜಲಿ ಸುವರ್ಣ,ವೀಣಾ ಶೆಟ್ಟಿ, ವಿಜಯ್ ಸುವರ್ಣ, ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹಾಗೂ ಊರ ಗ್ರಾಮಸ್ಥರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!