ಕರಾವಳಿ
ಉಡುಪಿ ಜಿಲ್ಲೆಗೆ ನೂತನ ಎಸ್ಪಿ ಯಾಗಿ ಹಾಕೈ ಅಕ್ಷಯ್ ಮಚೀಂದ್ರಾ ನೇಮಿಸಿ ಸರಕಾರ ಆದೇಶ

ಉಡುಪಿ : ಉಡುಪಿ ಜಿಲ್ಲೆಗೆ ನೂತನ ಎಸ್.ಪಿ ಯಾಗಿ ಚಿಕ್ಕಮಗಳೂರು ಜಿಲ್ಲೆ ಎಸ್.ಪಿ ಆಗಿದ್ದ ಹಾಕೈ ಅಕ್ಷಯ್ ಮಚಿಂದ್ರಾ ನೇಮಿಸಿ ಸರಕಾರ ಆದೇಶ ಹೊರಡಿಸಿದೆ ಎಂದು ತಿಳಿದು ಬಂದಿದೆ.
ಉಡುಪಿ ಜಿಲ್ಲೆಯ ಎಸ್.ಪಿ ಯಾಗಿ ಕಳೆದ ಎರಡು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ಎನ್.ವಿಷ್ಣುವರ್ಧನ್ ಅವರನ್ನು ಬೆಂಗಳೂರು ಗುಪ್ತಚರ ಇಲಾಖೆಯ ಪೊಲೀಸ್ ಅಧೀಕ್ಷಕರಾಗಿ ವರ್ಗಾವಣೆಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ನೂತನ ಎಸ್.ಪಿ ಅಕ್ಷಯ್ ಮಚಿಂದ್ರಾ ಅವರು ನಾಳೆಗೆ ಉಡುಪಿ ಜಿಲ್ಲೆಯ ಎಸ್.ಪಿ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ತಿಳಿದು ಬಂದಿದೆ.