ಕರಾವಳಿ
ಉಡುಪಿ ರಜತ ಮಹೋತ್ಸವದ ಅಂಗವಾಗಿ “ಅಗ್ನಿಪಥ್ ದೌಡ್”75 ಕೀ.ಮೀ ಓಟ ಉಡುಪಿ ಕ್ಲಾಕ್ ಟವರ್ ಬಳಿ ಸ್ವಾಗತ

ಉಡುಪಿ ಜಿಲ್ಲಾ ರಜತ ಮಹೋತ್ಸವದ ಸುಸಂದರ್ಭದಲ್ಲಿ ಯುವ ಜನತೆಯನ್ನು ಸೈನ್ಯಕ್ಕೆ ಆಕರ್ಷಿಸುವ ನಿಟ್ಟಿನಲ್ಲಿ ಅಗ್ನಿಪಥ್ ಯೋಜನೆ ಕುರಿತು ಜಾಗೃತಿ ಮೂಡಿಸಲು ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಜಿಲ್ಲಾಡಳಿತ ಉಡುಪಿ ಜಿಲ್ಲೆ ಮತ್ತು ಟೀಮ್ ನೇಶನ್ ಫಸ್ಟ್ ಸಹಭಾಗಿತ್ವದಲ್ಲಿ ದಿನಾಂಕ 24-08-2022 ಕಾರ್ಕಳದಿಂದ ಆರಂಭವಾದ 75 ಕೀ.ಮೀ. ಮ್ಯಾರಥಾನ್ ಓಟ “ಅಗ್ನಿಪಥ್ ದೌಡ್” ಗೆ ಉಡುಪಿ ಕ್ಲಾಕ್ ಟವರ್ ಬಳಿ ತಲುಪಿದ್ದು, ಇಂದು ದಿನಾಂಕ 25-08-2022 ರಂದು ಅತಿ ಒಂದನೀಯ ಬಿಷಪ್ ಸ್ಟ್ಯಾನಿ ಬಿ ಲೋಬೊ, ಮಣಿಪಾಲ ಚರ್ಚ್ ಧರ್ಮ ಗುರುಗಳಾದ ರೋಮಿಯೋ ಲೂವೀಸ್ ಹಾಗೂ ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರಾದ ನಾಡೋಜ ಡಾ. ಜಿ ಶಂಕರ್ ಅವರೊಂದಿಗೆ ಶಾಸಕರಾದ ಕೆ. ರಘುಪತಿ ಭಟ್ ಚಾಲನೆ ನೀಡಿದರು ಶುಭ ಹಾರೈಸಿದರು.