ಕರಾವಳಿ

ಮನೆಯಲ್ಲಿದ್ದ ದ್ವಿಚಕ್ರ ವಾಹನ ಕಳವು : ಕಳ್ಳನೊಬ್ಬ ಕಳ್ಳತನ ನಡೆಸಿದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಮಲ್ಪೆ : ಉಡುಪಿ ಜಿಲ್ಲೆಯ ಮಲ್ಪೆ ಠಾಣಾ ವ್ಯಾಪ್ತಿಯ ಕಲ್ಮಾಡಿಯ ಉದ್ಯಮಿಯೊಬ್ಬರ ಮನೆಯ ಅಂಗಳದಲ್ಲಿ ಇಟ್ಟಿದ್ದ ಸ್ಕೂಟರ್ ಒಂದನ್ನು ಕಳ್ಳನೊಬ್ಬ ಕಳ್ಳತನ ನಡೆಸಿದ ನಡೆದಿದೆ.

ಕಳ್ಳನ್ನು ದ್ವಿಚಕ್ರ ವಾಹನವನ್ನು ಕಳ್ಳತನ ನಡೆಸುವ ದೃಶ್ಯ ಅವರ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಈ ದ್ವಿಚಕ್ರ ವಾಹನ (KA20E U8119) ಪದ್ಮನಾಭ ಕರ್ಕೇರ ಕಲ್ಮಾಡಿ ಅವರಿಗೆ ಸೇರಿದ್ದಾಗಿದೆ ಎಂದು ತಿಳಿದು ಬಂದಿದೆ.

(30/08/2022 ಮಂಗಳವಾರ)   ಬೆಳಿಗ್ಗೆ 10 ಗಂಟೆಗೆ ಈ ಪೋಟೋ ದಲ್ಲಿರುವ ವ್ಯಕ್ತಿ ದ್ವಿಚಕ್ರ ವಾಹನ ಕದ್ದು ಮಲ್ಪೆಯಿಂದ ಉಡುಪಿ ಕಡೆಗೆ ಪರಾರಿಯಾಗಿದ್ದಾನೆ‌. ಈತ ಮಲ್ಪೆಯಿಂದ ಉಡುಪಿ ಕಡೆ ಪರಾರಿಯಾಗಿದ್ದು ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ‌.

ಈ ಪೋಟೋದಲ್ಲಿ ಕಾಣುತ್ತಿರುವ ವ್ಯಕ್ತಿ ಕಂಡು ಬಂದಲ್ಲಿ ಕೂಡಲೇ ಮಲ್ಪೆ ಠಾಣೆಗೆ ಮಾಹಿತಿ ನೀಡಬೇಕಾಗಿ ವಿನಂತಿ ಮಾಡಲಾಗಿದೆ.

ಮಲ್ಪೆ ಪೊಲೀಸರು ಈ ಕಳ್ಳತನ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!