ಮುಂಬೈನಲ್ಲಿ ಉಳ್ಳಾಲದ ಯುವಕನ ಶವ ಚರಂಡಿಯಲ್ಲಿ ಪತ್ತೆ.

ಮಂಗಳೂರು: ಮುಂಬೈನ ಚರಂಡಿಯಲ್ಲಿ ಉಳ್ಳಾಲ ಸಮೀಪದ ಬಂಡಿಕೋಟ್ಯ ನಿವಾಸಿ ಸುಧೀರ್ ಕುಮಾರ್ ಅವರ ಪಾರ್ಥಿವ ಶರೀರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸುಧೀರ್ ಅವರ ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದೆ.
ಸುಧೀರ್ ಧರಿಸಿದ್ದ ಶರ್ಟ್‍ನ ಜೇಬಿನಲ್ಲಿ ಪತ್ತೆಯಾದ ಲೇಬಲ್‍ನಿಂದ ಶವವನ್ನು ಪೊಲೀಸರು ಗುರುತಿಸಿದ್ದಾರೆ.
ಸುಧೀರ್ ಕುಮಾರ್ ಅವರು ಆಗಸ್ಟ್ 14 ರಿಂದ ನಾಪತ್ತೆಯಾಗಿದ್ದರು. ಮುಂಬೈನ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದ ನಂತರ ವಸಾಯಿ ಪೊಲೀಸ್ ಠಾಣೆಯ ವ್ಯಾಪ್ತಿಯ ಚರಂಡಿಯಲ್ಲಿ ಶವ ಪತ್ತೆಯಾಗಿದೆ. ಸುಧೀರ್ ಕುಮಾರ್ ಗೆ ಜೀವ ಬೆದರಿಕೆ ಇತ್ತು ಎಂದು ಸುಧೀರ್ ಕುಮಾರ್ ಸ್ನೇಹಿತರಿಗೆ ಹೇಳಿದ್ದಾರೆ ಎನ್ನಲಾಗಿದೆ.
ಸುಧೀರ್ ಕುಮಾರ್ ಉಳ್ಳಾಲದ ಮೆಸ್ಕಂನಲ್ಲಿ ಡಿ ಗ್ರೂಪ್‍ಕಾರ್ಯಕರ್ತೆಯಾಗಿ ದುಡಿದ ಕೆಲವು ವರ್ಷದ ಹಿಂದೆ ನಿವೃತ್ತಿಯಾದ ಮಾಲತಿಯವರ ಪುತ್ರ, ಚಿಕ್ಕಂದಿನಲ್ಲೇ ಮುಂಬೈಗೆ ತೆರಳಿದ್ದರಿಂದ ಸುಧೀರ್ ಬಗ್ಗೆ ಸ್ಥಳೀಯರಿಗೆ ಹೆಚ್ಚು ತಿಳಿದಿಲ್ಲ.