ಕರಾವಳಿ

ಲಯನ್ಸ್ ಕ್ಲಬ್ ವತಿಯಿಂದ ಮದರ್ ಥೆರೆಸಾ ಜನ್ಮ ದಿನಾಚರಣೆ

ಉಡುಪಿ: ಲಯನ್ಸ್ ಕ್ಲಬ್ ಬ್ರಹ್ಮಗಿರಿ ಮತ್ತು ಲಯನ್ಸ್ ಕ್ಲಬ್
ಮಣಿಪಾಲ್ ವ್ಯಾಲಿ ಇವರ ಸಹಯೋಗದೊಂದಿಗೆ ಆಗಸ್ಟ್
27 ರಂದು ಪುರಭವನದಲ್ಲಿ ಮದರ್ ತೆರೇಸಾ ಅವರ
112ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪ್ರಸಾದ್
ನೇತ್ರಾಲಯದ ಡಾಕ್ಟರ್ ಮೈತ್ರಿ ತುಂಗಾ ಇವರು ಕಣ್ಣಿನ
ಆರೈಕೆ, ಜಾಗರೂಕತೆ ಹಾಗೂ ನೇತ್ರ ದಾನದ ಬಗ್ಗೆ
ವಿವರಿಸಿದರು.

ಅಪಘಾತದಲ್ಲಿ ಕಾಲಿಗೆ ಏಟಾಗಿ ಚಿಕಿತ್ಸೆ ನಡೆಸುತ್ತಿರುವ
ಕುಕ್ಕಿಕಟ್ಟೆಯ ಅಭಿಷೇಕ್ ಶೇಟ್ ಅವರ ತಾಯಿಗೆ
ಸಹಾಯಧನವನ್ನು ಕ್ಲಬ್ಬಿನ ಪರವಾಗಿ ಪಿಡಿಜಿ ಲಯನ್
ಸುರೇಶ್ ಪ್ರಭು ಹಸ್ತಾಂತರಿಸಿದರು.

ಲಯನ್ಸ್ ಕ್ಲಬ್ ಮಣಿಪಾಲ್ ವ್ಯಾಲಿ ಅಧ್ಯಕ್ಷೆ ಲಯನ್
ಸಾಧನಾ ಕಿಣಿ, ಕಾರ್ಯದರ್ಶಿ ಲಯನ್ ರಾಜು ಪಹುಜಾ,
ಪ್ರಾಂತ್ಯ ಆರರ ಕಾರ್ಯದರ್ಶಿ ಲಯನ್ ಗಿರೀಶ್ ರಾವ್,
ಉಪಸ್ಥಿತರಿದ್ದರು.

ಲಯನ್ಸ್ ಕ್ಲಬ್ ಬ್ರಹ್ಮಗಿರಿಯ ಕಾರ್ಯದರ್ಶಿ ಲಯನ್ ಗೀತಾ ವಿ ರಾವ್ ಸ್ವಾಗತಿಸಿ ವಂದಿಸಿದರು. ಬ್ಲಾಕ್ ಬೆಲ್ಟ್ ನಾಲ್ಕನೇ ಡೆನ್ ರೆಫ್ರಿ ರಾಜಶೇಖರ್ ಮತ್ತು ಶಿರಿಬೀಡು ಯೂನಿಟ್ ನ ಬ್ಲಾಕ್ ಬೆಲ್ಟ್ ರೆಫ್ರಿ ವರುಣ್ ಮತ್ತು ಅವರ ವಿದ್ಯಾರ್ಥಿಗಳಿಂದ ಟೈಕ್ವಾಂಡೋ ಪ್ರದರ್ಶನ ನಡೆಯಿತು. ನ್ಯಾಷನಲ್ ಲೆವೆಲ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ 8 ವರ್ಷ ಪ್ರಾಯದ ಬಾಲಕ ಉಗಮ್ ಆರ್ ಪಹುಜಾ ಪ್ರದರ್ಶನ ನೀಡಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!