ಸೆಪ್ಟೆಂಬರ್ 3 ರಂದು ನವೀಕೃತ ನಾರಾಯಣಗುರು ಆಡಿಟೋರಿಯಂ ಲೋಕಾರ್ಪಣೆ

ಉಡುಪಿ: ಬನ್ನಂಜೆ ಬಿಲ್ಲವರ ಸೇವಾ ಸಂಘದ ನವೀಕೃತ
ನಾರಾಯಣಗುರು ಆಡಿಟೋರಿಯಂ ಸೆಪ್ಟೆಂಬರ್ ೩
ಶನಿವಾರ ಸಂಜೆ 4 ಗಂಟೆಗೆ ಲೋಕಾರ್ಪಣೆಗೊಳ್ಳಲಿದ್ದು,
ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಚಿವರಾದ ಕೋಟ ಶ್ರೀನಿವಾಸ್
ಪೂಜಾರಿ, ವಿ. ಸುನಿಲ್ ಕುಮಾರ್, ಶಾಸಕ ರಘುಪತಿ ಭಟ್, ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್, ಕಟಪಾಡಿ ವಿಶ್ವನಾಥ ಕ್ಷೇತ್ರದ ಬಿ.ಎನ್. ಶಂಕರ ಪೂಜಾರಿ, ನಗರಸಭಾ ಸದಸ್ಯೆ ಸವಿತಾ ಹರೀಶ್ ರಾಂ ಉಪಸ್ಥಿತರಿರಲಿದ್ದಾರೆ.
ಸಂಜೆ 4 ಗಂಟೆಗೆ ಶ್ರೀಮತಿ ಭವ್ಯಶ್ರೀ ಹರೀಶ್ ಮತ್ತು ಬಳಗ
ಮತ್ತು ಕು.ಶ್ರೀರಕ್ಷಾ ಹೆಗಡೆ ಮತ್ತು ಬಳಗದವರಿಂದ
ಯಕ್ಷಗಾನ ಸ್ವರಾಂಜಲಿ ಕಾರ್ಯಕ್ರಮ ಜರುಗಲಿದೆ ಎಂದು
ಉಡುಪಿ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಆನಂದ
ಪೂಜಾರಿ ತಿಳಿಸಿದ್ದಾರೆ.
ನವೀಕೃತ ಆಡಿಟೋರಿಯಂ ಸಂಪೂರ್ಣ
ಹವಾನಿಯಂತ್ರಿತವಾಗಿದ್ದು,550 ಮಂದಿ ಆಸನ,
ಏಕಕಾಲದಲ್ಲಿ450 ಮಂದಿಯ ಭೋಜನ ಶಾಲೆ ಇದ್ದು
ಶುದ್ಧ ಸಸ್ಯಾಹಾರಿ ಊಟೋಪಚಾರವಿರುತ್ತದೆ. ಮದುವೆ
ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಶುಭಕಾರ್ಯಗಳಿಗೆ
ಬೇಕಾದ ಆಧುನಿಕ ಸೌಲಭ್ಯ ಲಭ್ಯವಿದೆ.