ಕರಾವಳಿ
ಬಂಟ್ವಾಳ; ಅಶ್ ಅರಿಯ್ಯ ಶಾಲೆಯ ಬಾಲಕ ಶಾಲಾ ವಾಹನದಡಿ ಸಿಲುಕಿ ಮೃತ್ಯು !

ಬಂಟ್ವಾಳ;ಶಾಲಾ ವಾಹನದ ಚಕ್ರದಡಿ ಸಿಲುಕಿ ಬಾಲಕಮೃತಪಟ್ಟ ದಾರುಣ ಘಟನೆ ಸುರಿಬೈಲು ಎಂಬಲ್ಲಿ ನಡೆದಿದೆ.
ಸುರಿಬೈಲು ಮುಹಮ್ಮದಲಿ ಸಖಾಫಿ ಪುತ್ರ ಆದಿಲ್ (4) ಮೃತ ಬಾಲಕ.
ದಾರುಲ್ ಅಶ್ ಅರಿಯ್ಯ ಆಂಗ್ಲ ಮಾಧ್ಯಮ ಶಾಲೆಯ ಎಲ್ ಕೆಜಿ ವಿದ್ಯಾರ್ಥಿ ಯಾಗಿದ್ದ ಆದಿಲ್ ಗೆ ಇಂದು ಶಾಲೆಯಿಂದ ಕಾರಿನಲ್ಲಿ ಡ್ರೈವರ್ ಕರೆದುಕೊಂಡು ಬಂದಿದ್ದಾನೆ.
ಕಾಡಂಗಡಿಯಲ್ಲಿರುವ ಮನೆ ಬಳಿ ಮಗುವನ್ನು ಇಳಿಸಿ ಕಾರಿನಿಂದ ಇಳಿದ ಮಗು ಮನೆಗೆ ಹೋಗಿದೆ ಎಂದು ಭಾವಿಸಿದ ಚಾಲಕ ವಾಹನ ಚಲಾಯಿಸಿದ್ದು, ಮಗು ಚಕ್ರದಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದೆ.
ಈ ಕುರಿತು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.