ವಿಶೇಷ ಲೇಖನಗಳು
ಐಪಿಎಲ್ ಸೆಪ್ಟೆಂಬರ್ 19ರಿಂದ ಪುನರಾರಂಭ!

ಕೊರೋನಾದಿಂದ ಮುಂದೂಡಿಕೆಯಾಗಿದ್ದ 14ನೇ ಆವೃತ್ತಿಯ ಐಪಿಎಲ್ ಸೆಪ್ಟೆಂಬರ್ 19ರಂದು ಮರುಆರಂಭಗೊಳ್ಳಲಿದೆ.
ಮೊದಲ ದಿನ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಪಂದ್ಯ ನಡೆಯಲಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಐಪಿಎಲ್ನ ದ್ವಿತಿಯಾರ್ಧದ ಪಂದ್ಯಗಳು ನಡೆಯಲಿವೆ. ಅಕ್ಟೋಬರ್ 10ರಂದು ಎಲಿಮಿನೇಟರ್ ನಡೆಯಲಿದ್ದು, ಕ್ವಾಲಿಫೈಯರ್ 1 ಮತ್ತು 2 ಕ್ರಮವಾಗಿ ಅಕ್ಟೋಬರ್ 11 ಮತ್ತು 12ರಂದು ನಿಗದಿಯಾಗಿದೆ. ಅಕ್ಟೋಬರ್ 15ರಂದು ಫೈನಲ್ ಪಂದ್ಯ ನಡೆಯಲಿದೆ.
ದ್ವಿತೀಯಾರ್ಧ ಲೀಗ್ನ ಸಂಪೂರ್ಣ ಪಂದ್ಯಗಳ ವೇಳಾಪಟ್ಟಿಯಲ್ಲಿ ಆದಷ್ಟು ಶೀಘ್ರದಲ್ಲೇ ತಂಡಗಳಿಗೆ ರವಾನಿಸಲಿದ್ದೇವೆ ಎಂದು ಬಿಸಿಸಿಐ ಮೂಲಗಳು ಹೇಳಿವೆ