ಕರಾವಳಿ
ಉಡುಪಿ ಜಿಲ್ಲಾ ಅಖಿಲ ಭಾರತ ತುಳುನಾಡ ದೈವಾರಾಧಕರ ಒಕ್ಕೂಟದವರಿಗೆ ಶಾಸಕ ರಘುಪತಿ ಭಟ್ ಅವರಿಂದ ಆಹಾರ ಸಾಮಗ್ರಿಗಳ ಕಿಟ್ ವಿತರಣೆ

ಕೊರೋನಾ 2ನೇ ಅಲೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿದ್ದ ಸಂದರ್ಭದಲ್ಲಿ ತುಳುನಾಡ ದೈವಾರಾಧಕರು ಸಂಕಷ್ಟಕ್ಕೊಳಗಾದದನ್ನು ಮನಗಂಡು ಶಾಸಕ ಶ್ರೀ ಕೆ. ರಘುಪತಿ ಭಟ್ ರವರು ತಮ್ಮ ವೈಯಕ್ತಿಕ ಹಣದಿಂದ ಉಡುಪಿ ಜಿಲ್ಲಾ ಅಖಿಲ ಭಾರತ ತುಳುನಾಡ ದೈವಾರಾಧಕರ ಒಕ್ಕೂಟ (ರಿ.) ಇದರ 150 ಜನರಿಗೆ ಕೊಡಮಾಡಿದ ಆಹಾರ ಸಾಮಗ್ರಿಗಳ ಕಿಟ್ ಇಂದು ದಿನಾಂಕ 22-09-2021 ರಂದು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಘವೇಂದ್ರ ಕಿಣಿ ಹಾಗೂ ಗ್ರಾಮಾಂತರ ಬಿಜೆಪಿ ಅಧ್ಯಕ್ಷರಾದ ವೀಣಾ ನಾಯ್ಕ್ ರವರು ಸಾಲಿಕೇರಿ ಗುಡೆಬೆಟ್ಟು ಗರಡಿಯಲ್ಲಿ ವಿತರಿಸಿದರು.
ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ಶ್ರೀಧರ್ ಪೂಜಾರಿ ಬೈಕಾಡಿ, ಉಪಾಧ್ಯಕ್ಷರಾದ ಸದಾನಂದ್ ಪೂಜಾರಿ ಬಿರ್ತಿ, ಪ್ರಧಾನ ಕಾರ್ಯದರ್ಶಿಯಾದ ನಿತ್ಯಾನಂದ ಪೂಜಾರಿ ಚಾಂತಾರು, ಹಾಗೂ ಸದಸ್ಯರು ಉಪಸ್ಥಿತರಿದ್ದರು.