ಕರಾವಳಿ
ಮಣಿಪಾಲ : ಕುಡಿದ ಮತ್ತಿನಲ್ಲಿ ಯುವಕನೊಬ್ಬ ಕಾರನ್ನು ಹಿಮ್ಮುಖವಾಗಿ ಚಲಾಯಿಸಿ ಸರಣಿ ಅಪಘಾತ

ಮಣಿಪಾಲ : ಉಡುಪಿ ಜಿಲ್ಲೆಯ ಮಣಿಪಾಲ ಸಮೀಪ ಯುವಕನೊಬ್ಬ ನಿನ್ನೆ ರಾತ್ರಿ ಕುಡಿದ ಮತ್ತಿನಲ್ಲಿ ತನ್ನ ಇನ್ನೋವಾ ಕಾರನ್ನು ಚಲಾಯಿಸಿ ಸರಣಿ ಅಪಘಾತ ನಡೆಸಿದ ಘಟನೆ ನಡೆದಿದೆ.
ಇನ್ನೋವಾ ಚಾಲಕ ಸುಹಾಸ್ ಕುಡಿದ ಮತ್ತಿನಲ್ಲಿ ಮಣಿಪಾಲದ ಪಬ್ ಒಂದರ ಹೊರಗೆ ತನ್ನ ಕಾರನ್ನು ಹಿಂದೆ ತೆಗೆಯುವ ಭರದಲ್ಲಿ ಹಿಂದೆ ಇದ್ದ ಕೆಲವು ಕಾರಿಗೆ ಢಿಕ್ಕಿ ಹೊಡೆದಿದ್ದಾನೆ ಮತ್ತು ಪಾದಚಾರಿಗಳಿಗೆ ಢಿಕ್ಕಿ ಹೊಡೆದಿದ್ದಾನೆ ಎಂದು ತಿಳಿದು ಬಂದಿದೆ.
ಘಟನೆ ಸ್ಥಳಕ್ಕೆ ಕೂಡಲೇ ಮಣಿಪಾಲ ಪೊಲೀಸರು ಆಗಮಿಸಿ ಯುವಕನನ್ನು ವಶಕ್ಕೆ ಪಡೆದುಕೊಂಡು ಕೇಸ್ ದಾಖಲಿಸಿದ್ದಾರೆ.
ಯುವಕ ಸರಣಿ ಅಪಘಾತ ನಡೆಸಿದ ವಿಡಿಯೋ ಈಗ ಎಲ್ಲಾ ಕಡೆ ವೈರಲ್ ಆಗಿದೆ.
ಮಣಿಪಾಲದ ಸರ್ಕಲ್ ಇನ್ಸ್ಪೆಕ್ಟರ್ ಮಂಜುನಾಥ್ ಗೌಡ ಮತ್ತು ಸಬ್ ಇನ್ಸ್ಪೆಕ್ಟರ್ ರಾಜ್ ಶೇಖರ ವಂದಲಿ ಈ ಪ್ರಕರಣವನ್ನು ವಿಚಾರಣೆ ನಡೆಸುತ್ತಿದ್ದಾರೆ.