ಕರಾವಳಿ
ವರುಣ್ ಪೈಪಿಂಗ್ ಸಿಸ್ಟಮ್ಸ್ ಮಣಿಪಾಲ ಇವರು ಮುಖ್ಯಮಂತ್ರಿ ಕೋವಿಡ್ ಪರಿಹಾರ ನಿಧಿಗೆ 5 ಲಕ್ಷ ರೂ ದೇಣಿಗೆ ಚೆಕ್ ಜಿಲ್ಲಾಧ್ಯಕ್ಷರಿಗೆ ನೀಡಿದ್ದಾರೆ !!!

ವರುಣ್ ಪೈಪಿಂಗ್ ಸಿಸ್ಟಮ್ಸ್ ಮಣಿಪಾಲ ಇವರು ಮುಖ್ಯಮಂತ್ರಿ ಕೋವಿಡ್ ಪರಿಹಾರ ನಿಧಿಗೆ ನೀಡಿದ ರೂ. 5 ಲಕ್ಷ ದೇಣಿಗೆ ಚೆಕ್ ಶಾಸಕರ ಸಮ್ಮುಖದಲ್ಲಿ ಜಿಲ್ಲಾಧಿಕಾರಿಯವರಿಗೆ ಹಸ್ತಾಂತರ
ವರುಣ್ ಪೈಪಿಂಗ್ ಸಿಸ್ಟಮ್ಸ್ ಮಣಿಪಾಲ ಇವರು ಮುಖ್ಯಮಂತ್ರಿ ಕೋವಿಡ್ ಪರಿಹಾರ ನಿಧಿಗೆ ದೇಣಿಗೆಯಾಗಿ ರೂ. 5 ಲಕ್ಷ ಮೊತ್ತದ ಚೆಕ್ಕನ್ನು ಶಾಸಕ ಕೆ. ರಘುಪತಿ ಭಟ್ ಅವರ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರಿಗೆ ಹಸ್ತಾಂತರಿಸಿದರು.
ಈ ಮಹತ್ತರ ಕೊಡುಗೆಗೆ ಶಾಸಕ ಕೆ. ರಘುಪತಿ ಭಟ್ ರವರು ಮೆಚ್ಚುಗೆಯನ್ನು ವ್ಯಕ್ತಪಡಿಸಿ ಅಭಿನಂದನೆಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಲಾಲಾಜಿ ಆರ್ ಮೆಂಡನ್, ವರುಣ್ ಪೈಪಿಂಗ್ ಸಿಸ್ಟಮ್ಸ್ ಮಣಿಪಾಲದ ಪಾಲುದಾರರಾದ ಎಂ. ವಿಶ್ವನಾಥ್ ಭಟ್, ವಲ್ಲಭ ಭಟ್ ಉಪಸ್ಥಿತರಿದ್ದರು.