ರಾಷ್ಟ್ರೀಯ

ಭಾರತದ ಎಲ್ಲಾ ಮಾದರಿ ಕ್ರಿಕೆಟಿಗೆ ವಿದಾಯ ಘೋಷಿಸಿದ ಸುರೇಶ್ ರೈನಾ

ಮುಂಬೈ : ಟೀಂ ಇಡಿಯಾ ಆಲ್‌ ರೌಂಡರ್‌ ಆಗಿದ್ದ ಕ್ರಿಕೆಟಿಗ ಸುರೇಶ್‌ ರೈನಾ ಅವರು ಎಲ್ಲಾ ಮಾದರಿಯ ಕ್ರಿಕೆಟ್‌‌ಗೆ ವಿದಾಯ ಘೋಷಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ನನ್ನ ದೇಶ ಮತ್ತು ರಾಜ್ಯ ಯುಪಿಯನ್ನು ಪ್ರತಿನಿಧಿಸುವುದು ಒಂದು ಗೌರವವಾಗಿದೆ. ನಾನು ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಿಗೆ ನಿವೃತ್ತಿ ಘೋಷಿಸಲು ಬಯಸುತ್ತೇನೆ. ಬಿಸಿಸಿಐ, ಯುಪಿ ಕ್ರಿಕೆಟ್ ಅಕಾಡೆಮಿ, ಚೆನ್ನೈ ಸೂಪರ್ ಕಿಂಗ್ಸ್, ರಾಜೀವ್ ಶುಕ್ಲಾರಿಗೆ ಧನ್ಯವಾದ ಹೇಳಲು ಇಚ್ಚಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ಇನ್ನು ರೈನಾ ಅವರು 205 ಪಂದ್ಯಗಳಲ್ಲಿ 5528 ರನ್ ಗಳಿಸುವ ಮೂಲಕ ಐಪಿಎಲ್ ನಲ್ಲಿ ದಾಖಲೆ ಬರೆದಿದ್ದು, ಇತ್ತೀಚಿನ ಐಪಿಎಲ್ ಹರಾಜಿನಲ್ಲಿ, ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಉಳಿಸಿಕೊಳ್ಳಲಿಲ್ಲ ಮತ್ತು ಇತರ ಯಾವುದೇ ತಂಡಗಳು ಅವರನ್ನು ಖರೀದಿಸಲಿಲ್ಲ ಎಂದು ತಿಳಿದುಬಂದಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!