ಕರಾವಳಿ

ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ(ರಿ) ನೇತೃತ್ವದಲ್ಲಿ ಗುರು ಸಂದೇಶ ವಾಹನ ಜಾಥಾ.

ಉಡುಪಿ:  ಬ್ರಹ್ಮಶ್ರೀ ನಾರಾಯಣ ಗುರುವರ್ಯರ 168 ನೇ ಜನ್ಮ ದಿನಾಚರಣೆಯ ಪ್ರಯುಕ್ತ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ನೇತೃತ್ವದಲ್ಲಿ ನಮ್ಮ ಸಮಾಜದ ವಿವಿಧ ಬಿಲ್ಲವ ಸಂಘಟನೆಗಳ ಸಹಕಾರದೊಂದಿಗೆ ದಿನಾಂಕ 11-09- 2022ರಂದು ಆದಿತ್ಯವಾರ ಮಧ್ಯಾಹ್ನ 2:00 ಗಂಟೆಗೆ ಗುರು ಸಂದೇಶದ ವಾಹನ ಜಾಥವು ನಡೆಯಲಿದೆ.

ಬನ್ನಂಜೆ ಬಿಲ್ಲವ ಸೇವಾ ಸಂಘದಲ್ಲಿ ವಿವಿಧ ಬಿಲ್ಲವ ಸಂಘ-ಸಂಸ್ಥೆಗಳ, ನಾರಾಯಣ ಗುರುಗಳ ಅನುಯಾಯಿಗಳ ಮತ್ತು ಗರೋಡಿ ಪ್ರಮುಖರ ಉಪಸ್ಥಿತಿಯಲ್ಲಿ ನಾರಾಯಣ ಗುರುಗಳಿಗೆ ಗುರುಮಂದಿರದಲ್ಲಿ ಪ್ರಾರ್ಥನೆ ಮಾಡಿ ನಂತರ
ಖ್ಯಾತ ಉದ್ಯಮಿ, ಸಮಾಜದ ಹಿರಿಯರಾದ ವಿಶ್ವನಾಥ ಸನಿಲ್‌ರವರು ಗುರು ಸಂದೇಶ ಜಾಥ ರಥಕ್ಕೆ ಚಾಲನೆ
ನೀಡುವ ಮೂಲಕ ಉದ್ಘಾಟಿಸಲಿದ್ದಾರೆ. ಗುರು ಸಂದೇಶ ಜಾಥದ ರಥವು ಬೃಹತ್ ವಾಹನ ಜಾಥದ ಮೂಲಕ
ಬನ್ನಂಜೆಯಿಂದ ಹೊರಟು ಸಿಟಿ ಬಸ್ ನಿಲ್ದಾಣ ಜೋಡುಕಟ್ಟೆ ಮಾರ್ಗವಾಗಿ ಅಂಬಲಪಾಡಿ ಕಿದಿಯೂರು, ಕಲ್ಮಾಡಿ ಮಲ್ಪೆ ವೃತ್ತಕ್ಕೆ ಸುತ್ತು ಹಾಕಿ ವಡಬಾಂಡೇಶ್ವರ ವೃತ್ತ, ಸಿಟಿಜನ್‌ ಸರ್ಕಲ್‌ನಿಂದ ಕೊಡವೂರು ಗರಡಿಮಜಲು
ಮಾರ್ಗವಾಗಿ ಸಂತೆಕಟ್ಟೆ ಜಂಕ್ಷನ್ ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಿ ಬನ್ನಂಜೆಯಲ್ಲಿ ಸಂಜೆ 5:30 ಗಂಟೆಗೆ
ಗುರುಪೂಜೆಯೊಂದಿಗೆ ಸಮಾಪನಗೊಳ್ಳಲಿದೆ. ಪ್ರತೀ ವರ್ಷವೂ ಗುರುಜಯಂತಿಯ ಪ್ರಯುಕ್ತ ಕಾರ್ಯಕ್ರಮಗಳನ್ನು ಸಂಘಟಿಸುತ್ತಿರುವ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಈ ಬಾರಿ ಗುರು ಸಂದೇಶ ವಾಹನ ಜಾಥವನ್ನು ಆಯೋಜಿಸಿದೆ.

ನಾರಾಯಣ ಗುರುಗಳು ಸಮಾಜ ಸುಧಾರಣೆಗಾಗಿ ಮಾಡಿದ ವಿಶೇಷ ಸಾಧನಗಳಿಂದ ಜಗದ್ಗುರುವೆನಿಸಿದ್ದು ಅವರ ತತ್ವ ಸಂದೇಶಗಳು ಸಾರ್ವಕಾಲಿಕ ಯೋಗ್ಯವಾದುದು. ಈ ನಿಟ್ಟಿನಲ್ಲಿ ಗುರು ಸಂದೇಶದ
ಅರಿವು ಮತ್ತು ಜಾಗೃತಿ ಮೂಡಿಸುವ ರೀತಿಯಲ್ಲಿ ಜಾಥವು ನಡೆಯಲಿದೆ. ಬಿಲ್ಲವ ಸಂಘ-ಸಂಸ್ಥೆಗಳ, ನಾರಾಯಣ
ಗುರುಗಳ ಅನುಯಾಯಿಗಳು ಹಾಗೂ ಬಿಲ್ಲವ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗುರು ಸಂದೇಶ ಜಾಥಾವನ್ನು ಯಶಸ್ವಿಗೊಳಿಸಬೇಕೆಂದು ಬಯಸುತ್ತೇವೆ.

ಪ್ರವೀಣ್ ಎಮ್ ಪೂಜಾರಿ ಜಿಲ್ಲಾಧ್ಯಕ್ಷರು, ಗೌರವಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ) ಉಡುಪಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!