ಕರಾವಳಿ

ಮುನಿಯಾಲು : ಸಂಜೀವಿನಿ ಫಾರ್ಮ್‌ – ಗೋಧಾಮದಲ್ಲಿ ಮಂಗಳೂರಿನ ಖ್ಯಾತ ಸಿ.ಎ. ಎಸ್.ಎಸ್.‌ ನಾಯಕ್‌ ಷಷ್ಠ್ಯಬ್ಧಿಯ ಸಂಭ್ರಮ. ಗೋ ಸೂಕ್ತ ಹೋಮ ವಿಶೇಷ ಪೂಜೆ – ಗೋಸೇವೆ.

ಮುನಿಯಾಲು : ಮಂಗಳೂರಿನಖ್ಯಾತ ಸಿ.ಎ. ಎಸ್.ಎಸ್.‌ ನಾಯಕ್‌ ಮತ್ತು ಸಂಧ್ಯಾ ಎಸ್‌ ನಾಯಕ್‌ ದಂಪತಿಗಳು ಶನಿವಾರ ಮುನಿಯಾಲಿನಲ್ಲಿರುವ ದೇಶೀಯ ಗೋತಳಿಗಳ ಅಭಿವೃದ್ಧಿ ಕೇಂದ್ರ ಸಂಜೀವಿನಿ ಫಾರ್ಮ್‌ ಮತ್ತು ಡೈರಿ ಗೋಧಾಮದಲ್ಲಿ ತಮ್ಮ ಷಷ್ಠ್ಯಬ್ಧಿಯ ಶುಭ ಪರ್ವದ ಪ್ರಯುಕ್ತ ಗೋವುಗಳೊಂದಿಗೆ ಗೋ ಸೂಕ್ತ ಹೋಮ ವಿಶೇಷ ಪೂಜೆಯಲ್ಲಿ ಭಾಗಿಯಾದರು.

ಮುನಿಯಾಲಿನ ಪುಣ್ಯಕ್ಷೇತ್ರ ಗೋಧಾಮದಲ್ಲಿ ಬಂದು ಗೋಸೇವೆ ನೆರವೇರಿಸಿರುವುದು ತನ್ನ ಜೀವನದ ಸಂತಸದ ಕ್ಷಣ,ಕರಾವಳಿಯ ಭೂಧಾಮ ಎಂದರೆ ಅದು ಮುನಿಯಾಲಿನ ಗೋಧಾಮ, ಜನ್ಮ ಷಷ್ಠ್ಯಬ್ಧಿ ಜೀವನದ ಮೈಲಿಗಲ್ಲು, ಇಂತಹ ಅಪರೂಪದ ಕಾರ್ಯಕ್ರಮ ಗೋವುಗಳು ನಡೆದಾಡಿದ ಪುಣ್ಯಭೂಮಿಯಲ್ಲಿ ನೆರವೇರಿರುವುದು ನನ್ನ ಬದುಕಿನ ಸಾರ್ಥಕ ಕ್ಷಣ ಎಂದು ಸಿ.ಎ. ಎಸ್.ಎಸ್.‌ ನಾಯಕ್‌ ಮತ್ತು ಸಂಧ್ಯಾ ಎಸ್‌ ನಾಯಕ್‌ ದಂಪತಿಗಳು ಖುಷಿಪಟ್ಟರು. ತನ್ನ ಷಷ್ಠ್ಯಬ್ಧಿ ಸಂಭ್ರಮದ ಪ್ರಯುಕ್ತ ಗೋಧಾಮದ ಸದಸ್ಯತ್ವವನ್ನು ಎಸ್.ಎಸ್‌. ನಾಯಕ್‌ ಪಡೆದರು.
ದೇಶೀಯ ಗೋತಳಿಗಳ ಅಭಿವೃದ್ಧಿ ಕೇಂದ್ರ ಸಂಜೀವಿನಿ ಫಾರ್ಮ್‌ ಮತ್ತು ಡೈರಿ ಗೋಧಾಮದ ಸಂಸ್ಥಾಪಕ ಜಿ. ರಾಮಕೃಷ್ಣ ಆಚಾರ್‌ ಅಭಿನಂದನೆ ಸಲ್ಲಿಸಿ ಮಾತನಾಡಿದ ಮಂಗಳೂರು ನಗರದ ಉನ್ನತ ಸ್ಥಾನದ ವ್ಯಕ್ತಿ ಮುನಿಯಾಲಿನ ಗೋಧಾಮದಲ್ಲಿ ಗೋವುಗಳ ನಡುವೆಯ ಬದುಕಿನ ೬೦ರ ಸಾರ್ಥಕ ಸಂಭ್ರಮವನ್ನು ಎಲ್ಲರಿಗೂ ಮಾದರಿ, ಗೋವಿನ ಆರಾಧನೆ, ಪ್ರಕೃತಿಯ ಪೂಜೆಯ ಮೂಲಕ ಸೇವೆ ಮಾಡಿರುವುದು ನಮಗೆಲ್ಲ ಪ್ರೇರಣೆ ನೀಡಿದೆ. ಗೋಧಾಮದ ಉದ್ದೇಶ ಸಾರ್ಥಕವಾಗಿದೆ ಎಂದರು. ಉಡುಪಿಯ ಕುಮಾರಗುರು ತಂತ್ರಿ ಅವರ ನೇತ್ರತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಪುರೋಹಿತ್‌ ದಾಮೋಧರ ಶರ್ಮ ಅಭಿನಂದನ ಭಾಷಣ ಮಾಡಿದರು.

೫೦ ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯಮಿಗಳಾಗಲು ಪ್ರೇರಣೆ ಮಾರ್ಗದರ್ಶನ ನೀಡಿದ ಎಸ್ ಎಸ್‌ ನಾಯಕ್‌ ಅವರಿಗೆ ಗಣ್ಯರು ಅಭಿನಂದನೆ ಸಲ್ಲಿಸಿದರು. ಮಂಗಳೂರು ಇಸ್ಕಾನ್‌ ದೇವಾಲಯದ ಸನಂದನದಾಸ ಸ್ವಾಮೀಜಿ ಆಶೀರ್ವಚನ ನೀಡಿದರು.

ಎಸ್‌ ಎಸ್‌ ನಾಯಕ್‌ ತಾಯಿ ಲೀಲಾವತಿ ನಾಯಕ್‌, ಮಕ್ಕಳಾದ ಸಿ.ಎ. ಸಂಕೇತ್‌ ನಾಯಕ್‌, ವಕೀಲ ಸಚಿನ್‌ ನಾಯಕ್‌, ಸೊಸೆ ಪ್ರತೀಕ್ಷಾ ನಾಯಕ್‌, ಸಹೋದರ ಮಂಗಳೂರು ಎಕ್ಸ್‌ ಪರ್ಟ್‌ ಕಾಲೇಜಿನ ಮುಖ್ಯಸ್ಥ ನರೇಂದ್ರ ನಾಯಕ್‌, ಎಸ್ ಎಲ್‌.ನಾಯಕ್‌, ಕರ್ನಾಟಕ ಬ್ಯಾಂಕ್‌ ನಿವೃತ್ತ ಹಿರಿಯ ಅಧಿಕಾರಿ ನಾಗರಾಜ ರಾವ್‌, ವಿವಿಧ ಕ್ಷೇತ್ರಗಳ ಗಣ್ಯರಾದ ರಮೇಶ ರಾವ್‌ ಮಂಗಳೂರು, ಕಾರ್ಕಳ ವಿವೇಕಾನಂದ ಶೆಣೈ, ನಿತ್ಯಾನಂದ ಶೆಟ್ಟಿಗಾರ್‌, ಯೋಗೀಶ ಪೈ, ಡಾ. ನಯನಾ, ಸುರೇಶ್‌ ಶೆಣೈ ಮಂಗಳೂರು, ಕಾಡುಹೊಳೆ ಸುಬ್ರಹ್ಮಣ್ಯ ಭಟ್‌, ಗೋಧಾಮದ ಕಾರ್ಯದರ್ಶಿ ಸವಿತಾ ಆರ್‌ ಆಚಾರ್‌ ವಿವಿಧ ಗಣ್ಯರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!