ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಾಟ : ವಸ್ತುಗಳು ವಶ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೆಪ್ಟೆಂಬರ್ 6 ರಿಂದ 10 ರವರೆಗೆ ಕಸ್ಟಮ್ಸ್ ಅಧಿಕಾರಿಗಳು 44 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ಕಳ್ಳಸಾಗಣೆ ಮಾಡುತ್ತಿದ್ದ ಚಿನ್ನವನ್ನು ಜಪ್ತಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಮಂಗಳೂರು ಮತ್ತು ಕಾಸರಗೋಡಿನ ಮಹಿಳೆ ಸೇರಿದಂತೆ 5 ಪ್ರಯಾಣಿಕರಿಂದ 24 ಕ್ಯಾರೆಟ್ ಶುದ್ಧತೆಯ 869 ಗ್ರಾಂ ತೂಕದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಇವರೆಲ್ಲರೂ ದುಬೈನಿಂದ ಬಂದವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜೀನ್ಸ್ ಪ್ಯಾಂಟ್, ಒಳಉಡುಪು, ವೆಸ್ಟ್ (ಬನಿಯನ್), ಬೂಟುಗಳು ಮತ್ತು ಗುದನಾಳದಲ್ಲಿ ಇರಿಸಲಾಗಿರುವ ಪೇಸ್ಟ್ ಮತ್ತು ಪೌಡರ್ ರೂಪದಲ್ಲಿ ಮರೆಮಾಚಿ ಕಳ್ಳಸಾಗಾಣಿಕೆದಾರರು ಅಕ್ರಮ ಸಾಗಾಟ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತರ ಬಳಿ ಇದ್ದ ಅಕ್ರಮ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಅವರನ್ನು ಕಸ್ಟಮ್ಸ್ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.