ಕರಾವಳಿ
ಅಪರಿಚಿತ ವ್ಯಕ್ತಿಯ ಸಾವು

ಉಡುಪಿ: ಮಣಿಪಾಲ ಸಾರ್ವಜನಿಕ ಸ್ಥಳದಲ್ಲಿ ಮೃತಪಟ್ಟಿರುವ ಅಪರಿಚಿತ ವ್ಯಕ್ತಿಯೊಬ್ಬನ ಶವವನ್ನು ಮಣಿಪಾಲ ಪೋಲಿಸ್ ಠಾಣೆಯ ಪೋಲಿಸರು, ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ ಸಹಕಾರದಿಂದ ಕೆ.ಎಂ.ಸಿ ಆಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿಟ್ಟಿದ್ದಾರೆ.
ಮೃತ ವ್ಯಕ್ತಿಯನ್ನು ಪ್ರಭಾಕರ್ (50ವ) ಬಾಲಕೃಷ್ಣ, ಚಿಂತಾಮಣಿ ಸೊಸೈಟಿಯ ಹತ್ತಿರ ನೆರೂಲ್ ಮುಂಬೈಯ ನಿವಾಸಿ, ಮೃತನ ಸಂಬಂಧಿಕರು ಅಮಾಸೆಬೈಲು, ಅಂಬಾಗಿಲು ಪರಿಸರದಲ್ಲಿ ಇದ್ದಾರೆಂದು ಹೇಳಲಾಗುತ್ತಿದೆ. ಸಂಬಂಧಿಕರು ಮಣಿಪಾಲ ಪೋಲಿಸ್ ಠಾಣೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ. ಫೋ.ನಂ 9480805475, 9480805448 .