ಕರಾವಳಿ

ನಿಸ್ವಾರ್ಥ ಸಮಾಜ ಸೇವಕ ರವಿ ಕಟಪಾಡಿಗೆ ಶ್ರೀ ವಿನಾಯಕ ಸಾಧನ ಶ್ರೀ ಪುರಸ್ಕಾರ

  ಕೋಟ: ಶ್ರೀವಿನಾಯಕ ಯುವಕ ಮಂಡಲ (ರಿ)  ಸಾಹೇಬ್ರಕಟ್ಟೆ – ಯಡ್ತಾಡಿ ಅವರು ಕೊಡಮಾಡುವ  2022ನೇ ಸಾಲಿನ ಶ್ರೀ ವಿನಾಯಕ ಸಾಧನ ಶ್ರೀ ಪುರಸ್ಕಾರವನ್ನು ಕೃಷ್ಣ ಜನ್ಮಾಷ್ಟಮಿಯಂದುವೈವಿಧ್ಯಮಯ ವೇಷ ತೊಟ್ಟು ಸಂಗ್ರಹವಾದ ಹಣದಿಂದ ಅನಾರೋಗ್ಯ ಪೀಡಿತ ಮಕ್ಕಳ ವೈದ್ಯಕೀಯ ನೆರವು ನೀಡುವುದರ ಜೊತೆಗೆ ಹಲವಾರು ಸಮಾಜ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ನಿಸ್ವಾರ್ಥ ಸಮಾಜ ಸೇವಕ ರವಿ ಕಟಪಾಡಿ ಅವರನ್ನು ಆಯ್ಕೆ ಮಾಡಲಾಗಿದೆ.

ಪುರಸ್ಕಾರದ ಬಗ್ಗೆ ಮಾತನಾಡಿದ ಯುವಕ ಮಂಡಲದ ಅಧ್ಯಕ್ಷ ರಾಜೇಶ್ ದೇವಾಡಿಗ, ನಿಸ್ವಾರ್ಥ ಸೇವೆಯ ಮೂಲಕ ಅಶಕ್ತರ ಬಾಳಿಗೆ ಹೊಸ ಬದುಕು ನೀಡುತ್ತಿರುವ ರವಿ ಕಟಪಾಡಿ ಅವರು ಯುವ ಜನಾಂಗಕ್ಕೆ ಪ್ರೇರಣೆಯಾಗಿದ್ದಾರೆ.

ಅವರ ಈ ಸೇವೆಯನ್ನು ಗುರುತಿಸಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದರು. ಅಕ್ಟೋಬರ್ 2 ರಂದು ಸಾಯ್ಕಕಟ್ಟೆಯ ಮಹಾತ್ಮ ಗಾಂಧಿ ಪ್ರೌಢಶಾಲೆಯಲ್ಲಿ  11 ನೇ ವರ್ಷದ ಶ್ರೀ ಶಾರದ ಮಹೋತ್ಸವದ ಸಭಾ ಕಾರ್ಯಕ್ರಮದಲ್ಲಿ ಪುರಸ್ಕಾರ ಪ್ರದಾನ ಮಾಡಲಾಗುವುದೆಂದು ಯುವಕ ಮಂಡಲದ ಕಾರ್ಯದರ್ಶಿ ಪ್ರಭಾಕರ್ ಪೂಜಾರಿ ಅವರು ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!