ಕರಾವಳಿ

ಕಡಿಯಾಳಿ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಉಡುಪಿ: ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಜೂನ್ 1 ರಿಂದ ಜೂನ್ 10 ರ ವರೆಗೆ ನಡೆಯುವ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ದೇವಸ್ಥಾನದ ವಠಾರದಲ್ಲಿ ನಡೆಯಿತು.

ಜಗನ್ಮಾತೆ ಶ್ರೀ ಮಹಿಷಮರ್ದಿನಿಗೆ ಆಮಂತ್ರಣ ಪತ್ರಿಕೆ
ಸಮರ್ಪಣೆ ಗೊಳಿಸಿದ ನಂತರ ಡೋನ್ ಮೂಲಕ
ವಿಶಿಷ್ಟವಾಗಿ ವೇದಿಕೆಗೆ ಆಗಮಿಸಿದ ಆಮಂತ್ರಣ
ಪತ್ರಿಕೆಯನ್ನು ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ
ನಾಯಕ್ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ನಾಗೇಶ್ ಹೆಗ್ಡೆ, ಬ್ರಹ್ಮಕಲಶೋತ್ಸವದ ಸಮಿತಿಯ ಅಧ್ಯಕ್ಷರಾದ ಪುರುಷೋತ್ತಮ ಪಿ ಶೆಟ್ಟಿ, ಜೀರ್ಣೋದ್ಧಾರbಸಮಿತಿ ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ, ದೇವಳದ ಅರ್ಚಕರಾದ ರಾಧಾಕೃಷ್ಣ ಉಪಾಧ್ಯಾಯ, ಸಮಿತಿಯ ವ್ಯವಸ್ಥಾಪನ ಸಮಿತಿ ಸದಸ್ಯರಾದ ನಾಗರಾಜ
ಶೆಟ್ಟಿ, ನಗರಸಭಾ ಸದಸ್ಯರಾದ ಗೀತಾ ಶೇಟ್
ಉಪಸ್ಥಿತರಿದ್ದರು.

ತದನಂತರ ಪಟ್ಲ ಸತೀಶ್ ಶೆಟ್ಟಿ ಅವರ ಸಾರಥ್ಯದಲ್ಲಿ ನಡೆದ ಪಾವಂಜೆ ಮೇಳದ ವತಿಯಿಂದ ಸಮಾನ ಮನಸ್ಕರು ಕಡಿಯಾಳಿ ಪ್ರಾಯೋಜಕತ್ವದಲ್ಲಿ ಶ್ರೀ ದೇವಿ ಲಲಿತೋಪಾಖ್ಯಾನ ಎಂಬ ಯಕ್ಷಗಾನ ಬಯಲಾಟ ಆಡಿ ತೋರಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!