ರಾಜ್ಯ
ಅಕ್ರಮ ಮಾದಕ ವಸ್ತು ಸಾಗಾಟ : ಇಬ್ಬರ ಬಂಧನ

ಕಾಸರಗೋಡು: ಕಾಸರಗೋಡು ಪೊಲೀಸರು ಮಾದಕ ವಸ್ತುಗಳ ವಿರುದ್ಧ ಕಾರ್ಯಾಚರಣೆ ಮುಂದುವರಿಸಿದ್ದು, ಎಂಡಿಎಂಎ ಸಹಿತ ಇಬ್ಬರು ಆರೋಪಿಗಳನ್ನು ಡಿವೈಎಸ್ಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.
ಬಂಧಿತ ಆರೋಪಿಗಳನ್ನು ಹೊಸದುರ್ಗ ಹದ್ದಾದ್ ನಗರದ ಮಿಯಾದ್ ಮತ್ತು ಹೊಸದುರ್ಗ ಪೂಂಜಾವಿಯ ಮುಹಮ್ಮದ್ ಜುಬೈರ್ ಎಲ್.ಕೆ. ಎಂದುಗುರುತಿಸಲಾಗಿದೆ.
ಆರೋಪಿಗಳು ಸಂಚರಿಸುತ್ತಿದ್ದ ಕಾರನ್ನು ತಡೆದು ಪೊಲೀಸರು ತಪಾಸಣೆ ನಡೆಸಿದಾಗ ಮಾದಕ ವಸ್ತು ಸಾಗಾಟ ಪತ್ತೆಯಾಗಿದೆ. ಇದೀಗ ಪೊಲೀಸರು ಆರೋಪಿಗಳಿಂದ ಮೂರೂವರೆ ಗ್ರಾಂ. ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.