ರಾಷ್ಟ್ರೀಯ
ಇಂದಿನ ಕೋರೊನಾ ಪ್ರಕರಣ ವಿವರ
ನವದೆಹಲಿ: ದೇಶದಲ್ಲಿಕಳೆದ 24 ಗಂಟೆ ಅವಧಿಯಲ್ಲಿ
ಹೊಸದಾಗಿ 3615 ಕೊರೋನಾ ಸೋಂಕು ಪ್ರಕರಣ
ವರದಿಯಾಗಿದೆ. ಇದೇ ಅವಧಿಯಲ್ಲಿ ಕೊರೋನಾ
ಸೋಂಕಿತರಾಗಿದ್ದ 4972 ಮಂದಿ ಸೋಂಕಿನಿಂದ
ಗುಣಮುಖರಾಗಿದ್ದಾರೆ. ಇದು ಆಶಾದಾಯಕ ಬೆಳವಣಿಗೆಯಾಗಿದೆ.
ದೇಶದಲ್ಲಿ ಕೊರೋನಾ ಸಕ್ರಿಯ ಪ್ರಕರಣಗಳ ಸಂಖ್ಯೆ 40,979ಕ್ಕೆ ತಲುಪಿದೆ. ಪಾಸಿಟಿವಿಟಿ ದರ ಇದೀಗ ಶೇಕಡ 1.12ಕ್ಕೆ ತಲುಪಿದೆ.
ಕೊರೋನಾ ತಡೆಗಟ್ಟಲು ಎಲ್ಲ ಮುನ್ನೆಚ್ಚರಿಕೆ ವಹಿಸುವಂತೆ ಕೇಂದ್ರ ಆರೋಗ್ಯ ಇಲಾಖೆ ರಾಜ್ಯಗಳಿಗೆ ಸೂಚನೆ ನೀಡಿದೆ.