ದೇಶದಲ್ಲಿ PFI ಹಾಗೂ ಸಹವರ್ತಿ ಸಂಘಟನೆಗಳು 5 ವರ್ಷ ಬ್ಯಾನ್
ನವದೆಹಲಿ: ಕೇಂದ್ರ ಸರ್ಕಾರದ ಗೃಹ ಇಲಾಖೆ ಪಿಎಫ್‌ಐ
ಸಂಘಟನೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಐದು ವರ್ಷ ಬ್ಯಾನ್ ಮಾಡಿದೆ.
ಭಯೋತ್ಪಾದನೆಗೆ ಸಹಕಾರ, ಮತೀಯ ಸಂಘಟನೆಗಳನ್ನು
ಸೇರಲು ಜನರಿಗೆ ಕುಮ್ಮಕ್ಕು, ಕೋಮು ಗಲಭೆಯ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ದೇಶಾದ್ಯಂತ ಎನ್.ಐ.ಎ ಕಳೆದ ಕೆಲವು ದಿನಗಳಿಂದ ಪಿ.ಎಫ್.ಐ ಮತ್ತು ಅದಕ್ಕೆ ಸಂಬಂಧಿಸಿದ ಸಂಘಟನೆಗಳೊಂದಿಗೆ ಗುರುತಿಸಿಕೊಂಡವರನ್ನು ವ್ಯಾಪಕ ತನಿಖೆಗೆ ಒಳಪಡಿಸಿ ವಶಕ್ಕೆ ಪಡೆದುಕೊಳ್ಳಲಾಗಿತ್ತು.
ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಪಿಎಫ್‌ಐ
ಕಚೇರಿಗಳ ಮೇಲೆ ದಾಳಿ ಮಾಡಿದ್ದ ಎನ್‌ಐಎ ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿತ್ತು.
ಕಾನೂನು ಬಾಹಿರ ಸಂಘಟನೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಅದರ ಅಂಗಸಂಸ್ಥೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಐದು ವರ್ಷಗಳ ಅವಧಿಗೆ ನಿಷೇಧ ಮಾಡಲಾಗಿದೆ ಎಂದು ಸರ್ಕಾರ ಘೋಷಿಸಿದೆ.
ಯಾವ ಸಂಘಟನೆಗಳು ನಿಷೇಧ?
ಪಿ.ಎಫ್.ಐ ಮತ್ತು ಅದರ ಅಂಗ ಸಂಸ್ಥೆಗಳಾದ ರಿಹಬ್
ಇಂಡಿಯಾ ಫೌಂಡೇಶನ್ (ಆರ್.ಐ.ಎಫ್), ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿ.ಎಫ್.ಐ), ಆಲ್ ಇಂಡಿಯಾ ಇಮಾಮ್ಸ್ ಕೌಂಸಿಲ್ (ಎಐಸಿಸಿ), ನ್ಯಾಷನಲ್ ಕಾನ್ಸೆಡರೇಶನ್ ಆಫ್ ಹೂಮನ್ ರೈಟ್ಸ್ ಆರ್ಗನೈಸೇಶನ್ (ಎಸ್.ಸಿ.ಎಚ್.ಆರ್.ಓ), ನ್ಯಾಷನಲ್ ವುಮೆನ್ಸ್ ಫ್ರೆಂಟ್, ಜೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಶನ್ ಮತ್ತು ಕೇರಳದ ರಿಹ್ಯಾಬ್ ಫೌಂಡೇಶನ್ ಇತ್ಯಾದಿ ಸಂಘಟನೆಗಳನ್ನು ನಿಷೇಧಿಸಲಾಗಿದೆ.