ರಾಷ್ಟ್ರೀಯ
ಬ್ಯಾಂಕ್ ಸಿಬ್ಬಂದಿ ಯಡವಟ್ಟಿನಿಂದ ಆಸ್ಪತ್ರೆ ಸಿಬ್ಬಂದಿ ಖಾತೆಗೆ 1.50 ಕೋಟಿ ಜಮೆ

ತೆಲಂಗಾಣ ಸರ್ಕಾರದ ದಲಿತ ಬಂಧು ಯೋಜನೆಯ
ಭಾಗವಾಗಿದ್ದ 1.50 ಕೋಟಿ ರೂಪಾಯಿಗಳನ್ನು ಲೋಟಸ್ ಆಸ್ಪತ್ರೆಗಳ ಸಿಬ್ಬಂದಿಗೆ ಎಸ್‌ಬಿಐ ಬ್ಯಾಂಕ್ ಸಿಬ್ಬಂದಿ ತಪ್ಪಾಗಿ ಜಮೆ ಮಾಡಿದ್ದಾರೆ.
ಬ್ಯಾಂಕ್‌ನ ಕ್ಲರ್ಕ್ ಮಾಡಿರುವ ಕಾಪಿ ಪೇಸ್ಟ್ ದೋಷದಿಂದಾಗಿ ಈ ಯಡವಟ್ಟಾಗಿದೆ ಎಂದು ತಿಳಿದುಬಂದಿದೆ. ತಲಾ 10 ಲಕ್ಷ ರೂಪಾಯಿ ಹಣವನ್ನು ಖಾತೆಯಲ್ಲಿ ಪಡೆದಿದ್ದ 15
ಮಂದಿಯಲ್ಲಿ 14 ಮಂದಿ ಹಣವನ್ನು ಹಿಂದಿರುಗಿಸಿದ್ದರೆ ಒಬ್ಬರು ಮಾತ್ರ ಹಿಂದಿನ ಸಾಲ ತೀರಸಲು ಕೊಂಚ ಹಣವನ್ನು
ಬಳಕೆ ಮಾಡಿದ್ದಾರೆ ಎನ್ನಲಾಗಿದೆ.