ಕರಾವಳಿ
ಮುಂಬಯಿ : ಭಾಸ್ಕರ್ ಭೋಜಾ ಪೂಜಾರಿ ಹೃದಯಾಘಾತದಿಂದ ನಿಧನ : ವಾರಸುದಾರರ ಪತ್ತೆಗಾಗಿ ಮನವಿ

ಮುಂಬಯಿ : ಮಂಗಳೂರು ಮೂಲದ ವ್ಯಕ್ತಿಯೊಬ್ಬರು ಮುಂಬಯಿ ವಾಸಯಿ ಎಂಬಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ನಿಧನ ಹೊಂದಿದ ವ್ಯಕ್ತಿ ಭಾಸ್ಕರ್ ಬೋಜ ಪೂಜಾರಿ ಎಂದು ತಿಳಿದು ಬಂದಿದೆ.
ಭಾಸ್ಕರ ಪೂಜಾರಿ ಅವರ ತಾಯಿಯ ಹೆಸರು ಗಿರಿಜಾ ಪೂಜಾರಿ ಎಂದು ತಿಳಿದು ಬಂದಿದೆ.
ಕಳೆದ 30ವರ್ಷದಿಂದ ವಾಸಯಿ ನಿವಾಸಿಯಾಗಿದ್ದು,ವಾಸಯಿ ಪಶ್ಚಿಮದಲ್ಲಿ ವರ್ತಕ್ ಕಾಲೇಜು ಸಮೀಪ ಜ್ಯೂಸ್ ಅಂಗಡಿ ನಡೆಸುತ್ತಿದ್ದರು ಎನ್ನಲಾಗಿದೆ.
ಇವರು ನಿನ್ನೆ ಬೆಳಿಗ್ಗೆ ನಿಧನರಾಗಿದ್ದಾರೆ.ಇವರ ಶವವನ್ನು ವಾಸಯಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ.
ಇವರ ಮೂಲ ಮಂಗಳೂರು ಅಥವಾ ಉಡುಪಿ ಎಂದು ಅಂದಾಜಿಸಲಾಗಿದೆ. ಇವರ ವಾರಸುದಾರರ ಪತ್ತೆಗಾಗಿ ಮನವಿ ಮಾಡಲಾಗಿದೆ.
ಯಾರಾದರೂ ಊರಿನ ವಿಳಾಸ ಗೊತ್ತಿದ್ದಲಿ ದಯವಿಟ್ಟು ತಿಳಿಸಬೇಕಾಗಿ ಮುಂಬಯಿ ಬಿಲ್ಲವ ಮುಖಂಡ ರಿತೇಶ್ ಪೂಜಾರಿ ವಿನಂತಿಸಿದ್ದಾರೆ.
Pಊ : 098215 85151