ಕರಾವಳಿ
ಕಾಪು ತಾಲೂಕಿನ ಮೂಳೂರು ಕಡಲ ತೀರದಲ್ಲಿ ಬಲೆಗೆ ಬಿತ್ತು ದೊಡ್ದ ದೊಡ್ಡ ಗಾತ್ರದ ತೊರಕೆ ಮೀನು

ಕಾಪು : ಕಾಪು ತಾಲೂಕಿನ ಮೂಳೂರು ಕಡಲ ತೀರದಲ್ಲಿ ಬಲೆ ಬೀಸಿದ ಮೀನುಗಾರರು ಬಲೆಗೆ ಬಿದ್ದ ಮೀನು ಕಂಡು ಹಿರಿ ಹಿರಿ ಹಿಗ್ಗಿದ್ದಾರೆ.
ಮೀನುಗಾರರ ಬಲೆಗೆ ದೊಡ್ದ ದೊಡ್ಡ ಗಾತ್ರದ ನೂರಾರು ತೊರಕೆ ಮೀನುಗಳು ಬಿದ್ದು ಮೀನುಗಾರರಿಗೆ ಸುಗ್ಗಿಯಂತಾಗಿದೆ. ನೂರಾರು ಮಂದಿ ಬಲೆಗೆ ಬಿದ್ದ 50 ಕೆಜೆ ಯಷ್ಟು ತೂಕದ ನೂರಾರು ತೊರಕೆ ಮೀನುಗಳನ್ನು ನೋಡಲು ಸೇರಿದ್ದಾರೆ.
ದೊಡ್ಡ ಬಡಿಗೆಯಲ್ಲಿ ಅಧಿಕ ತೂಕದ ಮೀನುಗಳನ್ನು ಕಟ್ಟಿ ಮೀನುಗಾರರು ಮೇಲೆ ಸಾಗಿಸಿದ್ದಾರೆ. ಈ ಮೀನುಗಳಿಗೆ ಕೆಜಿಗೆ 250 ರಿಂದ 300 ರೂಪಾಯಿದ್ದು ಬಹಳಷ್ಟು ಬೇಡಿಕೆ ಇದೆ.ಇತ್ತೀಚಿನ ವಿವಿಧ ಮೀನುಗಳು ಕಡಲಿನಲ್ಲಿ ಹೇರಳವಾಗಿ ಸಿಗುತ್ತಿದ್ದು ಮೀನುಗಾರರಿಗೆ ಸಂತಸ ತಂದಿದೆ.