ರಾಷ್ಟ್ರೀಯ
ಚೀನಾಕ್ಕೆ ತೆರಳುತ್ತಿದ್ದ ಇರಾನ್ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ, ಆತಂಕ ಸೃಷ್ಟಿ
ನವದೆಹಲಿ: ಇರಾನ್ ನಿಂದ ಚೀನಾಕ್ಕೆ ತೆರಳುತ್ತಿದ್ದ ಪ್ರಯಾಣಿಕ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಆತಂಕ ಸೃಷ್ಟಿಯಾಗಿತ್ತು. ಲಾಹೋರ್ ಎಟಿಸಿ ಅಧಿಕಾರಿಗಳು ಈ ಸಂಬಂಧ ಪೈಲಟ್ ಗೆ ಮಾಹಿತಿ ನೀಡಿದ್ದರು ಎಂದು ವರದಿಯಾಗಿದೆ.
ಆ ಹೊತ್ತಿನಲ್ಲಿ ವಿಮಾನ ಭಾರತದ ವಾಯು ಪ್ರದೇಶದ ಮೇಲೆ ಹಾರಾಟ ನಡೆಸುತ್ತಿತ್ತು. ಪೈಲಟ್ ವಿಮಾನವನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿಸಲು ಅನುಮತಿ ಕೋರಿದ್ದರು.
ದೆಹಲಿ ಬೇಡ ಜೈಪುರದಲ್ಲಿ ಲ್ಯಾಂಡ್ ಮಾಡಿ ಎಂದು
ಸೂಚಿಸಲಾಗಿತ್ತು. ಇದನ್ನು ನಿರಾಕರಿಸಿದ ಪೈಲಟ್ ವಿಮಾನವನ್ನು ಮುಂದಕ್ಕೆ ಚಲಾಯಿಸಿದ್ದಾರೆ. ಇದೀಗ ವಿಮಾನ ಭಾರತದ ವಾಯು ಪ್ರದೇಶದಿಂದ ತೆರಳಿದೆ. ಭಾರತದ ವಾಯು ಪ್ರದೇಶದಿಂದ ನಿರ್ಗಮಿಸುವ ತನಕ ವಾಯು ಪಡೆಯ ವಿಮಾನಗಳು ವಿಮಾನದ ರಕ್ಷಣೆಗೆ ತೆರಳಿದ್ದವು