ಕರಾವಳಿ
ಕೋಟ: ವಿದೇಶದಿಂದ ಬಂದಿದ್ದ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

ಕೋಟ ಅ.4: ಸಾಲ ಬಾಧೆಯಿಂದ ಮನನೊಂದು ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪುಟಾರ್ಡೊ (41) ಆತ್ಮಹತ್ಯೆ ಮಾಡಿಕೊಂಡವರು.
ಇವರು, ಸುಮಾರು 4 ವರ್ಷದ ಹಿಂದೆ ಕೊರೋನಾ ಸಮಯದಲ್ಲಿ ವಿದೇಶದಿಂದ ಊರಿಗೆ ಬಂದಿದ್ದು ಊರಿನಲ್ಲಿ ಮೀನುಗಾರಿಕೆ ಹಾಗೂ ಕೂಲಿ ಕೆಲಸ ಮಾಡಿಕೊಂಡಿದ್ದರು. ವಿಪರೀತ ಕುಡಿತದ ಅಭ್ಯಾಸವನ್ನು ಹೊಂದಿದ್ದ ಅವರು ಸುಮಾರು 6 ವರ್ಷದ ಹಿಂದೆ ಹೊಸ ಮನೆಯನ್ನು ಕಟ್ಟುವ
ಸಲುವಾಗಿ ಸಾಲ ಮಾಡಿಕೊಂಡಿದ್ದು ಈ ವಿಚಾರವಾಗಿ ಅಥವಾ ಬೇರೆ ಯಾವುದೋ ಕಾರಣಕ್ಕೆ ಬೇಸರಗೊಂಡು ನಿನ್ನೆ ರಾತ್ರಿಯಿಂದ ಇಂದು ಬೆಳಗ್ಗಿನ ಅವಧಿಯಲ್ಲಿ ಮನೆಯ ಹತ್ತಿರ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಮೃತರ ಅಣ್ಣ ವಿಲಿಯಂ ಪುಟಾರ್ಡೋ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.