ಕರಾವಳಿ

ಬ್ರಹ್ಮಾವರ- ಜಯಂಟ್ಸ್ ಗ್ರೇಟ್ ಡೇ

ಬ್ರಹ್ಮಾವರ: ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ಇದರ
ವತಿಯಿಂದ ಜಯಂಟ್ಸ್ ಸಪ್ತಾಹ ಸಮಾರೋಪ ಸಮಾರಂಭ ಜಯಂಟ್ಸ್ ಗ್ರೆಟ್ ಡೇ ಸೆಲೆಬ್ರೆಷನ್ ಕಾರ್ಯಕ್ರಮ ಬ್ರಹ್ಮಾವರ ಸಿಟಿ ಸೆಂಟರ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕಾರ್ಮಿಕ ಅಧಿಕಾರಿ ಬಿ.ಆರ್ ಕುಮಾರ್, ವಿವಿಧ ರೀತಿಯ ಸವಲತ್ತುಗಳನ್ನು ಕಾರ್ಮಿಕರು ಬಳಕೆ ಮಾಡಿ ಉತ್ತಮ ರೀತಿಯ ಜೀವನ ನಡೆಸಬೇಕು. ಜಯಂಟ್ಸ್ ಬ್ರಹ್ಮಾವರ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದೆ. ಇದೊಂದು ಮಾದರಿ ಸಂಸ್ಥೆ ಎ೦ದರು. ಕಾರ್ಮಿಕರ
ಕುಂದುಕೊರತೆಗಳ ಬಗ್ಗೆ ಮಾಹಿತಿ ನಮ್ಮ ಗಮನಕ್ಕೆ ತಂದಲ್ಲಿ
ಕಾನೂನ್ಮತಕವಾಗಿ ಬಗೆಹರಿಸಲು ಬದ್ಧರಿದ್ದೇವೆ ಎಂದು
ತಿಳಿಸಿದರು.

ಜಯಂಟ್ಸ್ ವೆಕ್ಟೇರ್ ಫೆಡರೇಶನ್ ಪಿ.ಆರ್.ಒ ಗೋಪಾಲ್
ನುಗ್ಗೆಹಳ್ಳಿ ಮಾತನಾಡಿ, ಬ್ರಹ್ಮಾವರ ಜಯಂಟ್ಸ್ ತಂಡ
ಮಾದರಿಯಾದ ಸಂಸ್ಥೆಯಾಗಿದ್ದು, ವಿವಿಧ ಜನಪರ ಕಾರ್ಯ ನಡೆಸುತ್ತಿರುವುದು ಅಭಿನಂದನೀಯ ಎಂದರು.

ಸಮಾಜದಲ್ಲಿ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಹಿರಿಯ ನಾಗರೀಕರ ಸಂಘದ ಅಧ್ಯಕ್ಷ ಭಾಸ್ಕರ ರೈ, ವಿಶ್ವ ದಾಖಲೆಯ ಅಂಚೆ ಚೀಟಿ ಸಂಗ್ರಾಹಕ ಡೆನೀಯಲ್ ಮೊಂತೆರೋ, ರಾಜ್ಯ ಪ್ರಶಸ್ತಿ ಪಡೆದ ಮುಖ್ಯ ಶಿಕ್ಷಕಿ ದೇವ ಕುಮಾರಿ, ಬಹುಮುಖ ಬಾಲ ಪ್ರತಿಭೆ ಸಮೃದ್ಧಿ ಮುಂತಾದವರನ್ನು ಸನ್ಮಾನಿಸಲಾಯಿತು.

ಬಡ ರೋಗಿಗಳಿಗೆ ಸಹಾಯ ಮಾಡಲು ಜಯಂಟ್ಸ್ ಗ್ರೂಪ್
ಬೆಂಗಳೂರು ಗಾರ್ಡನ್ ಸಿಟಿ ವತಿಯಿಂದ ಕೊಡಮಾಡಿದ
ಅಕ್ಸಿಜನ್ ಕಾನ್ಸನೈಟರ್ ನ್ನು ಹಸ್ತಾಂತರಿಸಲಾಯಿತು. ಮೆಹಂದಿ ಮತ್ತು ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬಡ ರೋಗಿಗೆ ವಾಕರ್ ಸ್ಟಿಕ್ ನೀಡಲಾಯಿತು.

ವೇದಿಕೆಯಲ್ಲಿ ಯುನಿಟ್ ಡೈರೆಕ್ಟರ್ ಲಕ್ಷ್ಮೀಕಾಂತ್ ಬೆಳ್ಳೂರು, ಫೆಡರೇಶನ್ ಮಾಜಿ ಅಧ್ಯಕ್ಷ ಮಧುಸೂಧನ್ ಹೇರೂರು, ಅಧ್ಯಕ್ಷ ಸುಂದರ ಪೂಜಾರಿ ಮೂಡುಕುಕ್ಕುಡೆ, ಶ್ರೀನಾಥ್ ಕೋಟ ಮುಂತಾದವರಿದ್ದರು. ಹಿರಿಯ ನಾಗರೀಕರಾದ ಸೋಮಪ್ಪ ಪೂಜಾರಿ, ಕಮಲಾ ಪೂಜಾರಿಯವರನ್ನು ಗೌರವಿಸಲಾಯಿತು.

ಸುನೀತಾ ಮಧುಸೂದನ್ ವರದಿ ವಾಚಿಸಿದರು  ಅಣ್ಣಯ್ಯದಾಸ್, ಮಿಲ್ಸನ್ ಒಲಿವೇರಾ, ವಿವೇಕ್ ಕಾಮತ್, ರತ್ನ ಶ್ರೀನಾಥ್, ಪರಿಚಯಿಸಿದರು. ಮಧುಸೂಧನ್ ಹೇರೂರು ಪ್ರಸ್ತಾವನೆಗೈದರು. ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು.

ಮಿಲ್ಸನ್ ಒಲಿವೇರಾ, ವಿವೇಕ್ ಕಾಮತ್, ರತ್ನ ಶ್ರೀನಾಥ್,
ಪರಿಚಯಿಸಿದರು. ಮಧುಸೂಧನ್ ಹೇರೂರು ಪ್ರಸ್ತಾವನೆಗೈದರು.
ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!