ಉಡುಪಿ ನ್ಯೂಸ್ SHOP

ಕೋಟ: ಸಾರ್ವಜನಿಕರಿಂದ ಸರಕಳ್ಳಿಯರ ಸೆರೆ!

ಕೋಟ:ಶರನ್ನವರಾತ್ರಿ ಅಂಗವಾಗಿ ಕೋಟ ಅಮೃತೇಶ್ವರ ಹಲವು ಮಕ್ಕಳ ತಾಯಿ ದೇವಳದಲ್ಲಿ ಸಾವಿರಾರು ಭಕ್ತಾಧಿಗಳು ದೇವರ ದರ್ಶನಕ್ಕೆ ನೆರೆದಿದ್ದರು. ಈ ವೇಳೆ ತಮಿಳುನಾಡು ಮೂಲದ ಇರ್ವರು ಮಹಿಳಾ ಸರಗಳ್ಳರು ಭಕ್ತರ ಸೋಗಿನಲ್ಲಿ ಬಂದು ಭಕ್ತರಿಬ್ಬರ ಕತ್ತುಗಳಲ್ಲಿರುವ ಚಿನ್ನದ ಸರಕ್ಕೆ ಕೈ ಹಾಕಲು ಯತ್ನಿಸಿದರು.

ಆದರೆ ಸಮಯಕ್ಕೆ ಸರಿಯಾಗಿ ಅಲ್ಲೆ ನೆರೆದಿದ್ದ ಭಕ್ತರು ಸರಗಳ್ಳರನ್ನು ಸಾರ್ವಜನಿಕರ ಸಮ್ಮುಖದಲ್ಲಿ ಹಿಡಿದು ಕೋಟ ಆರಕ್ಷಕರಿಗೆ ಒಪ್ಪಿಸಿದ್ದಾರೆ.ಇರ್ವರು ಮಹಿಳಾ ಸರಗಳ್ಳರಲ್ಲಿ ಓರ್ವಾಕೆ ಗರ್ಭಿಣಿಯಾಗಿದ್ದಾಳೆ ಎನ್ನಲಾಗಿದೆ.

Leave a Reply

Your email address will not be published. Required fields are marked *

Back to top button
error: Content is protected !!