ಕರಾವಳಿ

4 ಜಿ ಯಿಂದ 5ಜಿಗೆ ಅಪ್‌ಡೇಟ್ ಹೆಸರಲ್ಲಿ ವಂಚಿಸಬಹುದು ಎಚ್ಚರಿಕೆಯಿಂದರುವಂತೆ ಪೊಲೀಸರ ಸೂಚನೆ..!

ಮಂಗಳೂರು/ಉಡುಪಿ: ದೇಶದ ಮಹಾನಗರಗಳಲ್ಲಿ 5ಜಿ
ಸೇವೆ ಈಗಾಗಲೆ ಬಿಡುಗಡೆಯಾಗಿದ್ದು, ಮುಂದಿನ ವರ್ಷಾಂತ್ಯದೊಳಗೆ ದೇಶಾದ್ಯಂತ ಲಭ್ಯವಾಗಲಿದೆ, ಈ
ಹಿನ್ನೆಲೆಯಲ್ಲಿ ಹ್ಯಾಕರ್ ಗಳ ಗುಂಪು ಸಕ್ರಿಯವಾಗಿದ್ದು,
ಇದನ್ನೇ ನೆಪವಾಗಿಸಿಕೊಂಡು ಗ್ರಾಹರನ್ನು ಮೋಸದ
ಜಾಲದೊಳಗೆ ಸಿಲುಕಿಸಿ, ಹಣ ದೋಚುವ ಕೆಲಸಕ್ಕೆ ಕೈ
ಹಾಕಲಿದ್ದಾರೆ ಎಂದು ಪೊಲೀಸ್ ಇಲಾಖೆ ಎಚ್ಚರಿಕೆನೀಡಿದೆ.

ಗ್ರಾಹಕರಿಗೆ ಕರೆ ಅಥವಾ ಸಂದೇಶಗಳ ಮೂಲಕ ಫೋನ್
ಅನ್ನು4ಜಿ ಯಿಂದ 5ಜಿ ಗೆ ಅಪ್ಡೇಟ್ ಮಾಡುತ್ತೇವೆಂದು
ಒಟಿಪಿ ಕೇಳುವ ಸೈಬರ್ ಕಳ್ಳರು ಗ್ರಾಹಕರ ಬ್ಯಾಂಕ್
ಖಾತೆಯಲ್ಲಿರುವ ಲಕ್ಷಾಂತರ ರೂಪಾಯಿಗಳನ್ನುದೋಚುವ ಸಾಧ್ಯತೆಗಳು ಹೆಚ್ಚಿವೆ. ಗ್ರಾಹಕರು ಯಾವುದೇ ಕಾರಣಕ್ಕೂ ಯಾವುದೇ ಲಿಂಕ್ ಅನ್ನು ತೆರೆಯಬಾರದು ಅಥವಾ ಯಾವುದೇ ಸಂದರ್ಭದಲ್ಲಿ ಒಟಿಪಿ ಅನ್ನು ನೀಡಬಾರದು, ಮೊಬೈಲ್ ಕಂಪನಿಗಳು ಇಂತಹ ಸಂದೇಶವನ್ನು ಕಳುಹಿಸುವುದಿಲ್ಲ ಮತ್ತು ಕರೆ ಮಾಡುವುದಿಲ್ಲ.

ಇಂತಹ ಸಂದೇಶಗಳು ಅಥವಾ ಕರೆಗಳು ಬಂದಲ್ಲಿ
ಅವುಗಳಿಗೆ ಪ್ರತಿಕ್ರಿಯಿಸಬಾರದು ಎಂದು ಪೊಲೀಸರು ಸಾರ್ವಜನಿಕರನ್ನು ಎಚ್ಚರಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!