ಲಾಗಿನ್ ಮಾಹಿತಿ ಕದಿಯುವ ಆಪ್ಗಳ ಬಗ್ಗೆ ಎಚ್ಚರಿಕೆ ನೀಡಿದ ಮೆಟಾ
ಸ್ಯಾನ್ಫ್ರಾನ್ಸಿಸ್ಕೊ: ಪಾಸ್ವರ್ಡ್ಗಳನ್ನು ಕದಿಯಲೆಂದೇ
ವಿನ್ಯಾಸಗೊಳಿಸಿದ ಸ್ಮಾರ್ಟ್ಫೋನ್ ಅಪ್ಲಿಕೇಶನ್ (ಆಪ್) ಗಳ ಬಗ್ಗೆ ಫೇಸ್ಬುಕ್ನ ಕಾರ್ಯನಿರ್ವಹಣೆಯನ್ನು
ನೋಡಿಕೊಳ್ಳುತ್ತಿರುವ ಮೆಟಾ ಸಂಸ್ಥೆ ಎಚ್ಚರಿಕೆ ನೀಡಿದೆ. ಪ್ರಸ್ತುತ ವರ್ಷದಲ್ಲಿ ಪಾಸ್ವರ್ಡ್ ಕದಿಯಲು ಮತ್ತು ಇತರ
ದುರುದ್ದೇಶಪೂರಿತ 400 ಕ್ಕೂ ಹೆಚ್ಚು ಅಪ್ಲಿಕೇಶನ್ಗಳನ್ನು ಮೆಟಾ ಗುರುತಿಸಿದೆ.
ಆಯಂಡ್ರಾಯ್ಡ್ ಮತ್ತು ಆಯಪಲ್ ಸಾಫ್ಟ್ವೇರ್ ಚಾಲಿತ
ಸ್ಮಾರ್ಟ್ ಫೋನ್ಗಳಿಗೆ ಹೊಂದಾಣಿಕೆಯಾಗುವಂತೆ ಈ
ಅಪ್ಲಿಕೇಶನ್ಗಳನ್ನು ನಿರ್ಮಿಸಲಾಗಿದೆ. ಪ್ಲೇ ಸ್ಟೋರ್ಗಳಲ್ಲೂ ಇವುಗಳು ಲಭ್ಯವಿವೆ ಎಂದು ಮೆಟಾದ ಅಡಚಣೆ ನಿವಾರಣಾ ವಿಭಾಗದ ನಿರ್ದೇಶಕರಾದ ಡೇವಿಡ್ ಅಗ್ರನೋವಿಚ್ ಮಾಹಿತಿ ನೀಡಿ ಫೇಸ್ಟುಕ್ ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದಾರೆ.
ಫೋಟೋ ಎಡಿಟರ್, ಗೇಮ್, ವಿಪಿಎನ್ ಸರ್ವಿಸ್, ಬ್ಯುಸಿನೆಸ್ ಅಪ್ಲಿಕೇಶನ್ಗಳಂತೆ ಈ ದುರುದ್ದೇಶಪೂರಿತ ಅಪ್ಲಿಕೇಶನ್ ಗಳನ್ನು ಮರೆಮಾಚಲಾಗಿದೆ ಎಂದು ಮೆಟಾ ಮಾಹಿತಿ ನೀಡಿದೆ. ಫೇಸ್ಬುಕ್ ಖಾತೆಗೆ ಲಾಗಿನ್ ಆಗುವಂತೆ ಬಳಕೆದಾರರನ್ನು ಕೇಳುವ ಈ ಅಪ್ಲಿಕೇಶನ್ ಗಳು ಒಂದು ವೇಳೆ ಲಾಗಿನ್ ಆದರೆ ಬಳಕೆದಾರರ ಯೂಸರ್ ನೇಮ್ ಮತ್ತು ಪಾಸ್ವರ್ಡ್ಗಳನ್ನು ಕದಿಯುತ್ತದೆ ಎಂದು ಮೆಟಾದ ಭದ್ರತಾ ತಂಡ ಹೇಳಿದೆ. ಲಾಗಿನ್ ಆದ ತಕ್ಷಣ ಹ್ಯಾಕರ್ಗಳು ಖಾತೆಗಳಿಗೆ ಪ್ರವೇಶ ಪಡೆಯುತ್ತಿದ್ದಾರೆ ಎಂದು ಮೆಟಾ ಎಚ್ಚರಿಕೆ ನೀಡಿದೆ.