ಕರಾವಳಿ
ಅಮೆರಿಕಾದಲ್ಲಿ ಗೋ ಶಾಲೆಗೆ ಭೂಮಿಪೂಜೆ

ಉಡುಪಿ: ಅಮೆರಿಕಾದ ರಾಜಧಾನಿ ವಾಷಿಂಗ್ಟನ್
ನಗರದಲ್ಲಿರುವ ಯುವ ಮಾಧ್ವ ಉದ್ಯಮಿಜಯಾಚಾರ್ಯ ಇವರು 25 ಎಕರೆ ವಿಶಾಲ ಪ್ರದೇಶದಲ್ಲಿಪ್ರಾರಂಭಿಸಲಿರುವ
ಗೋಶಾಲೆಯ ಭೂಮಿ ಪೂಜೆಯನ್ನು ಪುತ್ತಿಗೆ ಶ್ರೀಪಾದರು
ನೆರವೇರಿಸಿದರು. ಅಮೇರಿಕಾದಂತಹ ದೇಶದಲ್ಲಿ ಬಹಳ
ಸಾಹಸ ಮಾಡಿ ಗೋಶಾಲೆ ಮಾಡಲು ತೊಡಗಿರುವ
ಆಚಾರ್ಯ ದಂಪತಿಗಳನ್ನು ಶ್ರೀಗಳು ಅಭಿನಂದಿಸಿ
ಹರಸಿದರು.
ಈ ಸಂದರ್ಭದಲ್ಲಿ ವಾಷಿಂಗ್ಟನ್ ನಲ್ಲಿರುವ ಭಕ್ತರಿಗೆ ಪೂಜ್ಯ
ಶ್ರೀಪಾದರು ಮುದ್ರಾಧಾರಣೆ ಮಾಡಿದರು. ವಾಷಿಂಗ್ಟನ್
ನಲ್ಲಿರುವ ಪ್ರಸಿದ್ಧ ದೇವಸ್ಥಾನ ಭಕ್ತಆಂಜನೇಯದಲ್ಲಿ
ಪರ್ಯಾಯ ಸಂಚಾರದಲ್ಲಿರುವ ಪೂಜ್ಯ ಪುತ್ತಿಗೆ ಶ್ರೀಪಾದರಿಗೆ ಅರ್ಚಕ ವೃಂದ ಮತ್ತು ಭಕ್ತ ಜನರು
ವೈಭವದ ಗುರುವಂದನೆ ಸಲ್ಲಿಸಿದರು.