ರಾಷ್ಟ್ರೀಯ
ಇಂದಿನ ಕೊರೋನಾ ಪ್ರಕರಣ ವಿವರ
ನವದೆಹಲಿ: ದೇಶದಲ್ಲಿ ಹೊಸದಾಗಿ 2786 ಕೊರೋನಾ
ಸೋಂಕಿನ ಪ್ರಕರಣ ವರದಿಯಾಗಿದೆ. ಕಳೆದ ಒಂದು ವಾರದಿಂದ ಕೊರೋನಾ ಸೋಂಕಿನ ಪ್ರಮಾಣದಲ್ಲಿ ಇಳಿಮುಖವಾಗಿದೆ.
ಇದೇ ವೇಳೆ ದೇಶದಲ್ಲಿ ಸಕ್ರಿಯ ಕೊರೋನಾ ಪ್ರಕರಣಗಳ ಸಂಖ್ಯೆ 26,509ಕ್ಕೆ ತಲುಪಿದೆ. ಕೊರೋನಾ ಪೂರ್ತಿಯಾಗಿ ದೇಶದಿಂದ ತೊಲಗಿಲ್ಲ. ಕೇವಲ ನಿರ್ಗಮನದ ಹಾದಿಯಲ್ಲಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ
ಎಚ್ಚರಿಕೆ ನೀಡಿದೆ.
ಇದೇ ವೇಳೆ ಚೀನಾದಲ್ಲಿ ಪತ್ತೆಯಾಗಿರುವ ಒಮೈಕ್ರಾನ್ ಹೊಸ ತಳಿ ಕುರಿತಂತೆ ಎಚ್ಚರಿಕೆ ವಹಿಸುವಂತೆ ಕೇಂದ್ರ ಆರೋಗ್ಯ ಇಲಾಖೆ ರಾಜ್ಯಗಳಿಗೆ ಸೂಚನೆ ನೀಡಿದೆ